ಸೆಕೆಂಡ್ ಹ್ಯಾಂಡ್​ ಕಾರಿನ ಬೆಲೆಯಲ್ಲಿ ಹೊಸ ಕಾರು ಬೇಕಿದ್ದರೆ, ಇಂದೇ ಡ್ಯಾಟ್ಸನ್ ರೆಡಿ-ಗೋ ಕಾರನ್ನು ಬುಕ್ ಮಾಡಿ

Edited By:

Updated on: Oct 19, 2021 | 1:34 AM

ಒಂದು ಹೊಸ ಮತ್ತು ಅನೇಕ ಫೀಚರ್​ಗಳನ್ನು ಹೊಂದಿರುವ ಒಂದು ಉತ್ತಮ ಕಾರು ನಿಮಗೆ ಸೆಕೆಂಡ್ ಹ್ಯಾಂಡ್ ಕಾರಿನ ಬೆಲೆಯಲ್ಲಿ ಸಿಗುವಂತಿದ್ದರೆ, ಯೂಸ್ಡ್​ ಕಾರಿನ ಬಗ್ಗೆ ಯೋಚಿಸಲಾರಿರಿ.

ಕಾರು ಐಷಾರಾಮಿ ಬದುಕಿನ ಸಂಕೇತ, ಪ್ರತಿಷ್ಠೆಯ ದ್ಯೋತಕ ಅನ್ನುವ ಜಮಾನಾವೊಂದಿತ್ತು. ಕೇವಲ ಶ್ರೀಮಂತರ ಮನೆ ಮುಂದೆಯಷ್ಟೇ ಕಾರುಗಳು ಕಾಣಿಸುತ್ತಿದ್ದವು. ಆದರೆ ಈಗ ಜಮಾನಾ ಬದಲಾಗಿದೆ. ಕಾರು ಈಗ ಅವಶ್ಯಕತೆಯ ದ್ಯೋತಕವಾಗಿದೆ. ಮಧ್ಯಮವರ್ಗದ ಕುಟುಂಬದವರೂ ಕಾರುಗಳನ್ನು ಹೊಂದಿರುವ ಕಾಲವಿದು. ಈ ಪ್ರವೃತ್ತಿಗೆ ಬ್ಯಾಂಕ್​ಗಳು ನೀಡುತ್ತಿರುವ ಸಾಲವೂ ಕಾರಣವಾಗಿವೆ. ಬಹಳಷ್ಟು ಫ್ಯಾಮಿಲಿಗಳು, ಈ ಎಮ್ ಐಗಳ ಸೌಲಭ್ಯದಿಂದಾಗಿ ಕಾರುಗಳನ್ನು ಕೊಳ್ಳುತ್ತಿದ್ದಾರೆ. ಓಕೆ, ನೀವು ಕಾರು ಖರೀದಿಸುವ ನಿರ್ಧಾರಕ್ಕೆ ಬಂದಾಗ, ಸ್ನೇಹಿತರು, ಆಪ್ತರು ಒಂದು ಪುಕ್ಸಟ್ಟೆ ಸಲಹೆ ನೀಡಿತ್ತಾರೆ, ‘ಹೊಸ ಕಾರು ತೆಗೆದುಕೊಳ್ಳವುದರಲ್ಲಿ ಏನೂ ಅರ್ಥವಿಲ್ಲ ಮಾರಾಯಾ, ಸೆಕೆಂಡ್ ಹ್ಯಾಂಡ್ ಕಾರು ತಗೆದೆಕೊಳ್ಳೋದೇ ಬೆಟರ್ ಆಪ್ಷನ್.’ ಇಂಥ ಮಾತುಗಳು ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬಂದಿರುತ್ತವೆ.

ಆದರೆ, ಒಂದು ಹೊಸ ಮತ್ತು ಅನೇಕ ಫೀಚರ್​ಗಳನ್ನು ಹೊಂದಿರುವ ಒಂದು ಉತ್ತಮ ಕಾರು ನಿಮಗೆ ಸೆಕೆಂಡ್ ಹ್ಯಾಂಡ್ ಕಾರಿನ ಬೆಲೆಯಲ್ಲಿ ಸಿಗುವಂತಿದ್ದರೆ, ಯೂ್ಸ್ಡ್​​ ಕಾರಿನ ಬಗ್ಗೆ ಯೋಚಿಸಲಾರಿರಿ, ಹೌದು ತಾನೇ? ಡ್ಯಾಟ್ಸನ್ ಸಂಸ್ಥೆಯು ಹೊಸ ರೆಡಿ-ಗೋ ಕಾರನ್ನು ಲಾಂಚ್ ಮಾಡಿದ್ದು ಕೈಗೆಟಕುವ ಬೆಲೆಯಲ್ಲಿ ನಿಮಗದು ಲಭ್ಯವಾಗಲಿದೆ.

ಹೌದು ಮಾರಾಯ್ರೇ, ನೀವು ಈ ಹಬ್ಬದ ಸೀಸನ್ನಲ್ಲಿ ಅದನ್ನು ಕೊಳ್ಳುವುದಾದರೆ ಕನಿಷ್ಟ ರೂ. 40,000 ಗಳ ರಿಯಾಯಿತಿ ಸಿಗಲಿದೆ. ಅಂದಹಾಗೆ ದೆಹಲಿಯಲ್ಲಿ ರೆಡಿ-ಗೋ ಕಾರಿನ ಎಕ್ಸ್ ಶೋರೂಮ್ ಬೆಲೆ ರೂ. 3,83,000.

ಫೆಸ್ಟಿವಲ್ ಸೀಸನಲ್ಲಿ ನಿಮಗೆ ರೂ. 4 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸುಂದರವಾದ ಹೊಚ್ಚ ಹೊಸ ಕಾರು ನಿಮ್ಮ ಮನೆ ಮುಂದೆ ಬಂದು ನಿಲ್ಲಲಿದೆ. ಮಿನಿಮಮ್ ಬಜೆಟ್ನಲ್ಲಿ ಮ್ಯಾಕ್ಸಿಮಮ್ ಮೈಲೇಜ್ ನೀಡುವ ಕಾರಿದು. ಕಂಪನಿಯು ಕ್ಲೇಮ್ ಮಾಡಿರುವ ಪ್ರಕಾರ ಈ ಕಾರು ಲೀಟರ್​ಗೆ 22 ಕಿ ಮೀ ಓಡುತ್ತದೆ. ಚಿಕ್ಕ ಕುಟುಂಬ ಚಿಕ್ಕ ಕಾರು ಪರಿಕಲ್ಪನೆಯಲ್ಲಿ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ:   Shocking Video: ದೈತ್ಯ ನಾಗರಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಮುದ್ದಾಡಿದ ವ್ಯಕ್ತಿ; ವಿಡಿಯೋ ನೋಡಿ

Published on: Oct 18, 2021 04:24 PM