ನ್ಯೂ ಇಯರ್​ ಕಿಕ್​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​ ​

Updated on: Jan 01, 2026 | 1:28 AM

ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮಹಿಳೆಯರು ಸುರಕ್ಷಿತವಾಗಿ ಮನೆ ತಲುಪುವುದನ್ನು ಖಚಿತಪಡಿಸಲು ಬೆಂಗಳೂರು ಪೊಲೀಸರು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದ ಅಥವಾ ಮನೆಗೆ ತಲುಪಲು ಕಷ್ಟಪಡುವ ಮಹಿಳೆಯರಿಗಾಗಿ ಆಟೋ, ಕ್ಯಾಬ್ ಮತ್ತು ಉಳಿದುಕೊಳ್ಳುವ ಸೌಲಭ್ಯಗಳನ್ನು ಒದಗಿಸಿದ್ದಾರೆ. ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು, ಜನವರಿ 01: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಸಡಗರದಿಂದ ಕೂಡಿತ್ತು. ಜನರು ಪಾರ್ಟಿ, ಕುಣಿತ ಮತ್ತು ಮೋಜಿನಲ್ಲಿ ಪಾಲ್ಗೊಂಡು 2026 ಅನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಸಂಭ್ರಮಿಸುವುದು ಸಹಜವಾದರೂ, ಪಾರ್ಟಿಯ ನಂತರ ಪ್ರತಿಯೊಬ್ಬರೂ ಸುರಕ್ಷಿತವಾಗಿ ಮನೆ ತಲುಪುವುದು ಅತ್ಯಂತ ಮುಖ್ಯ. ಈ ವರ್ಷ ಬೆಂಗಳೂರು ಪೊಲೀಸರು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹೊಸ ವರ್ಷದ ಪಾರ್ಟಿ ಮುಗಿದ ನಂತರ ಮನೆಗೆ ತೆರಳಲು ಕಷ್ಟಪಡುತ್ತಿದ್ದ ಮಹಿಳೆಯರಿಗಾಗಿ ಬೆಂಗಳೂರು ಪೊಲೀಸರು ಆಟೋ ವ್ಯವಸ್ಥೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.