ನ್ಯೂ ಇಯರ್‌ ಎಫೆಕ್ಟ್​; ಕೆಆರ್‌ಎಸ್‌ ಗಾರ್ಡನ್‌ನಲ್ಲಿ ಜನಸಾಗರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 31, 2023 | 7:32 PM

ಹೊಸ ವರ್ಷ(New Year) ಆರಂಭಕ್ಕೆ ಕ್ಷಣಗಣನೆ ಇದ್ದು, ವಿಕೇಂಡ್ ಜೊತೆ ಹೊಸ ವರ್ಷಾಚರಣೆ ಹಿನ್ನೆಲೆ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ ಲಗ್ಗೆಯಿಟ್ಟಿದ್ದಾರೆ. ಅದರಂತೆ ವಿಶ್ವಪ್ರಸಿದ್ಧ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ KRS ಬೃಂದಾವನದಲ್ಲಿ ಪ್ರವಾಸಿಗರ ದಂಡು ಹರಿದು ಬಂದಿದೆ.

ಮಂಡ್ಯ, ಡಿ.31: ಹೊಸ ವರ್ಷ(New Year) ಆರಂಭಕ್ಕೆ ಕ್ಷಣಗಣನೆ ಇದ್ದು, ವಿಕೇಂಡ್ ಜೊತೆ ಹೊಸ ವರ್ಷಾಚರಣೆ ಹಿನ್ನೆಲೆ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ ಲಗ್ಗೆಯಿಟ್ಟಿದ್ದಾರೆ. ಅದರಂತೆ ವಿಶ್ವಪ್ರಸಿದ್ಧ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ KRS ಬೃಂದಾವನದಲ್ಲಿ ಪ್ರವಾಸಿಗರ ದಂಡು ಹರಿದು ಬಂದಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿದ್ದು, ಆಕರ್ಷಕ ಸಂಗೀತ ಕಾರಂಜಿ, ಅಚ್ಚ ಹಸಿರಿನ ಬೃಂದಾವನ ನೋಡುಗರ ಮನಸೆಳೆಯುತ್ತಿದೆ. ಈ ಮಧ್ಯೆ ಹಸಿರು ಪ್ರಕೃತಿಯ ಮಧ್ಯೆ ನಿಂತು ಪ್ರವಾಸಿಗರು ಫೋಟೋ ಕ್ಲಿಕ್ಕಿಸಿ ಸಂತಸ ಪಟ್ಟಿದ್ದಾರೆ. ಬೃಂದಾವನ ಸೌಂದರ್ಯ ಕಣ್ತುಂಬಿಕೊಂಡು ಹೊಸ ವರ್ಷಾಚರಣೆಯಲ್ಲಿ ಪ್ರವಾಸಿಗರು ತೊಡಗಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ