ಹೊಸ ವರ್ಷಕ್ಕೆ ಚಿಕ್ಕಮಗಳೂರಿನತ್ತ ಲಗ್ಗೆ ಇಟ್ಟ ಪ್ರವಾಸಿಗರು; ಎಲ್ಲೆಡೆ ಟ್ರಾಫಿಕ್, ಹೋಟೆಲ್‍ಗಳು ಫುಲ್
ಅಂತು ಇಂತು 2023ಕ್ಕೆ ಗುಡ್ ಬೈ ಹೇಳೋ ಕಾಲ ಸನ್ನಿಹಿತ. ವರ್ಷಾಂತ್ಯವನ್ನ ಕಲರ್ ಫುಲ್ಲಾಗಿ ಸೆಲೆಬ್ರೇಷನ್ ಮಾಡ್ಬೇಕು, 2024ನ್ನ ಅದ್ಧೂರಿಯಾಗಿ ಸ್ವಾಗತಿಸ್ಬೇಕು ಅಂತ ಎಲ್ರೂ ಕಾತರದಿಂದಿದ್ದಾರೆ. ಪ್ರವಾಸಿಗರ ಸ್ವರ್ಗ ಅಂತಾನೇ ಕರೆಸಿಕೊಳ್ಳೋ ಕಾಫಿನಾಡ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಈಗಾಗಲೇ ಫುಲ್ ಬುಕ್ಕಿಂಗ್ ಆಗಿದೆ. ಮತ್ತೊಂದೆಡೆ ಚಂದ್ರದ್ರೋಣ ಪರ್ವತದ ಕೈಮರ ಚೆಕ್ಪೋಸ್ಟ್ ಬಳಿ ಟ್ರಾಫಿಕ್ ಜಾಮ್ ಪ್ರವಾಸಿಗರ ಮೋಡ್ ಕೆಡಿಸಿದೆ.
ಚಿಕ್ಕಮಗಳೂರು, ಡಿ.31: ಇಯರ್ ಎಂಡ್ ಅಂದ್ರೆ ಏನೋ ಸಂಭ್ರಮ, ಸಡಗರ. ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವ ಸುಸಮಯ. ಹಾಗಾಗಿ, 2023ಕ್ಕೆ ಟಾಟಾ ಹೇಳಿ, 24ಕ್ಕೆ ವೆಲ್‍ಕಂ ಹೇಳೋಕೆ ಈಗಾಗ್ಲೇ ಪ್ಲಾನ್ ರೆಡಿಯಾಗಿದೆ (New Year). ಜನ ತಮ್ಮ ಫೇವರಿಟ್ ಸ್ಪಾಟ್ಗಳಿಗೆ ಹೋಗಿ ಸೆಟ್ಲ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಕಾಫಿನಾಡು ಚಿಕ್ಕಮಗಳೂರಂತೂ (Chikkamagaluru) ಹೌಸ್ ಫುಲ್ ಆಗಿದೆ. ಎಲ್ಲಿ ನೋಡಿದ್ರು ಪ್ರವಾಸಿಗರ ದಂಡು. ಇಯರ್ ಎಂಡ್ ಆಗಿರೋದ್ರಿಂದ ರಾಜ್ಯದ ಎತ್ತರದ ಪ್ರದೇಶವಾಗಿರೋ ಮುಳ್ಳಯ್ಯನಗಿರಿಯಲ್ಲಿ ಜನ ಸಾಗರವೇ ಕಂಡು ಬಂದಿದೆ. ಅದರಲ್ಲೂ ಚಂದ್ರದ್ರೋಣ ಪರ್ವತದ ಕೈಮರ ಚೆಕ್ಪೋಸ್ಟ್ ಬಳಿ ಟ್ರಾಫಿಕ್ ಜಾಮ್ ಹೆಚ್ಚಾಗಿದೆ.
ಚಿಕ್ಕಮಗಳೂರಿನ ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಫುಲ್ ಬುಕ್ ಆಗಿವೆ. ಬಹುತೇಕರು ಇಯರ್ ಎಂಡ್, ನ್ಯೂ ಇಯರ್ಗೆ ಬುಕ್ ಮಾಡಿಸಿದ್ದಾರೆ. ಕಾಫಿನಾಡ ಪ್ರಕೃತಿ ಸೌಂದರ್ಯ ಸವಿಯಲು ಸಜ್ಜಾಗಿದ್ದಾರೆ. ಕಾಫಿನಾಡಲ್ಲಿರೋ ಸುಮಾರು 1400ಕ್ಕೂ ಅಧಿಕ ಹೋಂ ಸ್ಟೇ ಹಾಗೂ 200ಕ್ಕೂ ಹೆಚ್ಚು ರೆಸಾರ್ಟ್‍ಗಳು ಆಲ್ ಮೋಸ್ಟ್ ಬುಕ್ ಆಗಿವೆ. ಫುಲ್ ಆಗಿವೆ. ಡಿಸೆಂಬರ್ ತಿಂಗಳಲ್ಲಿ ಕಾಫಿನಾಡಿಗೆ 11 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದ್ರೆ, ಡಿಸೆಂಬರ್ 30-31 ಹಾಗೂ ಜನವರಿ 1ರ ಮೂರೇ ದಿನಕ್ಕೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಕಾಫಿನಾಡಲ್ಲಿ ಜಮಾಯಿಸಲಿದ್ದಾರೆ. ಪ್ರಸಿದ್ಧ ಶೃಂಗೇರಿ ಶಾರದಾ ಮಠ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲೂ ಭಕ್ತರ ಜಾತ್ರೆ ನೆರೆದಿದೆ. ಪರ್ವತ ಶ್ರೇಣಿಗಳಲ್ಲಿ ನಿಮಿಷಕ್ಕೊಮ್ಮೆ ಬದಲಾಗೋ ಪ್ರಕೃತಿಯ ವಿಸ್ಮಯ ಕಂಡು ಪ್ರವಾಸಿಗ್ರು ಮೈಮರೆಯುತ್ತಿದ್ದಾರೆ. ಪ್ರವಾಸಿಗರ ದಂಡನ್ನ ಕಂಡ ಕೆಲ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ ಮಾಲೀಕರು ಪ್ರವಾಸಿಗರಿಂದ ದುಬಾರಿ ಹಣ ಕೇಳ್ತಿದ್ದಾರೆ.
ಇದನ್ನೂ ಓದಿ: Bengaluru New Year: ಸಂಭ್ರಮಾಚರಣೆ ವೇಳೆ ಅಸ್ವಸ್ಥಗೊಂಡ ಮಹಿಳೆಯರು ಹಾಗೂ ವೃದ್ಧರಿಗೆ ಚಿಕಿತ್ಸೆ ನೀಡಲು ಹಾಸಿಗೆ, ದಿಂಬು ರೆಡಿ
ಎಲ್ಲೆಡೆ ಫುಲ್ ಟ್ರಾಫಿಕ್ ಜಾಮ್
ಕೆಲ ಪ್ರವಾಸಿಗರು ಎರಡು-ಮೂರು ದಿನಗಳ ಹಿಂದೆಯೇ ಚಿಕ್ಕಮಗಳೂರಿಗೆ ಬಂದು ಸೆಟಲ್ ಆಗಿದ್ದಾರೆ. ಆದರೆ ಇಂದು ಬರುತ್ತಿರುವ ಪ್ರವಾಸಿಗರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. ಚಂದ್ರದ್ರೋಣ ಪರ್ವತದ ಕೈಮರ ಚೆಕ್ಪೋಸ್ಟ್ ಬಳಿ ಟ್ರಾಫಿಕ್ ಜಾಮ್ ಕಂಡು ಬಂದಿದ್ದು ಜನ ಹೈರಾಣಾಗುತ್ತಿದ್ದಾರೆ. ಇನ್ನು ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ