Bengaluru New Year: ಸಂಭ್ರಮಾಚರಣೆ ವೇಳೆ ಅಸ್ವಸ್ಥಗೊಂಡ ಮಹಿಳೆಯರು ಹಾಗೂ ವೃದ್ಧರಿಗೆ ಚಿಕಿತ್ಸೆ ನೀಡಲು ಹಾಸಿಗೆ, ದಿಂಬು ರೆಡಿ

Bengaluru New Year: ಸಂಭ್ರಮಾಚರಣೆ ವೇಳೆ ಅಸ್ವಸ್ಥಗೊಂಡ ಮಹಿಳೆಯರು ಹಾಗೂ ವೃದ್ಧರಿಗೆ ಚಿಕಿತ್ಸೆ ನೀಡಲು ಹಾಸಿಗೆ, ದಿಂಬು ರೆಡಿ

Jagadisha B
| Updated By: ವಿವೇಕ ಬಿರಾದಾರ

Updated on: Dec 31, 2023 | 9:31 AM

ಇನ್ನೇನು ಕೆಲವೇ ಗಂಟೆಗಳಲ್ಲಿ ನ್ಯೂ ಇಯರ್​ ಪಾರ್ಟಿಗಳು ಆರಂಭವಾಗುತ್ತವೆ. ಸಂಭ್ರಮಾಚರಣೆ ವೇಳೆ ಮಹಿಳೆಯರು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರಾದರೆ ಬೆಂಗಳೂರಿನಲ್ಲಿ ಐ ಲ್ಯಾಂಡ್ ನಿರ್ಮಿಸಲಾಗಿದೆ.

ಹೊಸ ವರ್ಷಾಚರಣೆಗೆ ಬೆಂಗಳೂರು (Bengaluru) ನಗರ ಸಜ್ಜಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ನ್ಯೂ ಇಯರ್​ ಪಾರ್ಟಿಗಳು ಆರಂಭವಾಗುತ್ತವೆ. ಎಂಜಿ ರೋಡ್​, ಬ್ರಿಗೇಡ್ ರೋಡ್​, ಚರ್ಚ್​ ಸ್ಟ್ರೀಟ್​ಗಳಲ್ಲಿ ಜನಜಂಗುಳಿ ಇರುತ್ತದೆ. ಸಂಭ್ರಮಾಚರಣೆ ವೇಳೆ ಮಹಿಳೆಯರು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರಾದರೆ ಐ ಲ್ಯಾಂಡ್ ನಿರ್ಮಿಸಲಾಗಿದೆ. ಫುಟ್​ಬಾತ್​ನಲ್ಲಿ ಟೆಂಟ್​ ಹಾಕಲಾಗಿದೆ. ಟೆಂಟ್​ ಒಳಗಡೆ ಹಾಸಿಗೆ ಮತ್ತು ದಿಂಬು ಇಡಲಾಗಿದೆ. ಇಲ್ಲಿ ಅಸ್ವಸ್ತಗೊಂಡ ವೃದ್ಧರಿಗೆ ಮತ್ತು ಮಹಿಳೆಯರ ಆರೋಗ್ಯದಲ್ಲಿ ಏರುಪೇರಾದರೇ ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತದೆ. ಐ ಲ್ಯಾಂಡ್ ಒಳಗಡೆ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ.