ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಹುಚ್ಚಾಟ ಮಾಡಿದ ಪತ್ನಿ!
ಮದುವೆಯಾದ 10 ದಿನಕ್ಕೆ ಗಂಡ ನಾಪತ್ತೆಯಾಗಿದ್ದು, ತನ್ನ ಗಂಡನನ್ನು ಹುಡುಕಿಕೊಡಿ ಎಂದು ನವವಧುವೊಬ್ಬಳು, ಪಟ್ಟು ಹಿಡಿದು ಕಳೆದ ಮೂರು ದಿನಗಳಿಂದ ಪೊಲೀಸರಿಗೆ ಹಾಗೂ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದ್ದಾಳೆ. ತುಮಕೂರು ಜಿಲ್ಲೆಯ ಪಾವಗಡ ಮೂಲದ ನಿವಾಸಿಯಾಗಿರುವ ಸಿಂಧು (20) ಎಂಬಾಕೆ ಅಕ್ಟೋಬರ್ 6ರಂದು ಗಣೇಶ ಎನ್ನುವಾತನನ್ನು ಮದುವೆಯಾಗಿದ್ದಳು. ಆದ್ರೆ, ಪತ್ನಿಯ ಕಾಟಕ್ಕೆ ಗಣೇಶ್ ಮನೆ ಬಿಟ್ಟು ಹೋಗಿದ್ದಾನೆ. ಇತ್ತ ಸಿಂಧು, ಗಂಡನನ್ನು ಹುಡುಕಿ ಕೊಡಿ ಎಂದು ಹೈಡ್ರಾಮವೇ ಸೃಷ್ಟಿಸಿದ್ದಾಳೆ. ಸಾಲದಕ್ಕೆ ಮತ್ತೆ ಇಂದು (ಅ,20) ಆಯುಧಪೂಜೆ ದಿನವೇ ನೆಲಮಂಗಲ ಸಮೀಪದ ಮಾಕಳಿ ಗ್ರಾಮದಲ್ಲಿ ಮೊಬೈಲ್ ಟವರ್ ಏರಿ ಕುಳಿತ್ತಿದ್ದಾಳೆ.
ಬೆಂಗಳೂರು, (ಅಕ್ಟೋಬರ್.20): ಮದುವೆಯಾದ 10 ದಿನಕ್ಕೆ ಗಂಡ ನಾಪತ್ತೆಯಾಗಿದ್ದು, ತನ್ನ ಗಂಡನನ್ನು ಹುಡುಕಿಕೊಡಿ ಎಂದು ನವವಧುವೊಬ್ಬಳು, ಪಟ್ಟು ಹಿಡಿದು ಕಳೆದ ಮೂರು ದಿನಗಳಿಂದ ಪೊಲೀಸರಿಗೆ ಹಾಗೂ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದ್ದಾಳೆ. ತುಮಕೂರು ಜಿಲ್ಲೆಯ ಪಾವಗಡ ಮೂಲದ ನಿವಾಸಿಯಾಗಿರುವ ಸಿಂಧು (20) ಎಂಬಾಕೆ ಅಕ್ಟೋಬರ್ 6ರಂದು ಗಣೇಶ ಎನ್ನುವಾತನನ್ನು ಮದುವೆಯಾಗಿದ್ದಳು. ಆದ್ರೆ, ಪತ್ನಿಯ ಕಾಟಕ್ಕೆ ಗಣೇಶ್ ಮನೆ ಬಿಟ್ಟು ಹೋಗಿದ್ದಾನೆ. ಇತ್ತ ಸಿಂಧು, ಗಂಡನನ್ನು ಹುಡುಕಿ ಕೊಡಿ ಎಂದು ಹೈಡ್ರಾಮವೇ ಸೃಷ್ಟಿಸಿದ್ದಾಳೆ. ಸಾಲದಕ್ಕೆ ಮತ್ತೆ ಇಂದು (ಅ,20) ಆಯುಧಪೂಜೆ ದಿನವೇ ನೆಲಮಂಗಲ ಸಮೀಪದ ಮಾಕಳಿ ಗ್ರಾಮದಲ್ಲಿ ಮೊಬೈಲ್ ಟವರ್ ಏರಿ ಕುಳಿತ್ತಿದ್ದಾಳೆ.
ಗಂಡೆ ಕಾಣೆಯಾಗಿರುವ ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಹ ಸಿಂಧು ಹುಚ್ಚಾಟ ಮಾತ್ರ ನಿಂತಿಲ್ಲ. ಗಂಡ ಬೇಕು ಎಂದು ನಿನ್ನೆ (ಅ.19) ಟವರ್ ಏರಿದ್ದಳು. ಕೊನೆಗೆ ಮನವೊಲಿಸಿ ಕೆಳಗಿಳಿಸಲಾಗಿತ್ತು. ಇದೀಗ ಇಂದು ಸಹ ಟವರ್ ಏರಿ ಗಂಡನನ್ನು ಹುಡುಕಿ ಕೊಡಿ ಎಂದು ಪಟ್ಟು ಹಿಡಿದಿದ್ದಾಳೆ. ಇದರಿಂದ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಕೊನೆಗೆ ಹರಸಾಹಸಪಟ್ಟು ಟವರ್ ಏರಿದ್ದ ಸಿಂಧುಳನ್ನು ಕೆಳಗಿಳಿಸಿ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

