ಅಪರಾತ್ರಿ ಮತ್ತು ಸುರಿಯುತ್ತಿದ್ದ ಮಳೆಯಲ್ಲಿ ಅಪಘಾತಕ್ಕೊಳಗಾದ ಬಸ್ಸಿನ ಪ್ರಯಾಣಿಕರು ಪಟ್ಟ ಪಡಿಪಾಟಲು ಸಾಮಾನ್ಯವಾದುದಲ್ಲ!
ಒಬ್ಬ ಮಹಿಳೆಯ ಕಾಲು ಸೀಟಿನ ನಡುವೆ ಸಿಕ್ಕಿಕೊಂಡ ಕಾರಣ ಅವರನ್ನು ಅಲ್ಲಿಂದ ಸರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಬ್ಯುಲೆನ್ಸ್ ಒಂದರಲ್ಲಿ ಶಿಫ್ಟ್ ಮಾಡಲು ಹರಸಾಹಸ ಪಡಬೇಕಾಯಿತು. ಬಸ್ ಚಾಲಕನ ಕಾಲಿಗೂ ಗಂಭೀರವಾದ ಗಾಯವಾಗಿದೆ.
ತುಮಕೂರು: ಇದು ನಿಜಕ್ಕೂ ನರಕಯಾತನೆ ಮಾರಾಯ್ರೇ. ಅಪರಾತ್ರಿಯ ಸಮಯ ಮತ್ತು ಮೇಲಿಂದ ಒಂದೇಸಮ ಸುರಿಯುತ್ತಿರುವ ಮಳೆಯಲ್ಲಿ ಖಾಸಗಿ ಬಸ್ಸೊಂದು (private bus) ತುಮಕೂರು (Tumakuru) ಶಿರಾ ತಾಲ್ಲೂಕಿನ ಉಜ್ಜಿನಕುಂಟೆ ಬಳಿ ಅಪಘಾತಕ್ಕೀಡಾಗಿದೆ. ಲಾರಿಯೊಂದಕ್ಕೆ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದ್ದರಿಂದ ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ 10 ಜನ ಗಾಯಗೊಂಡಿದ್ದಾರೆ. ಒಬ್ಬ ಮಹಿಳೆಯ ಕಾಲು ಸೀಟಿನ ನಡುವೆ ಸಿಕ್ಕಿಕೊಂಡ ಕಾರಣ ಅವರನ್ನು ಅಲ್ಲಿಂದ ಸರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಂಬ್ಯುಲೆನ್ಸ್ ಒಂದರಲ್ಲಿ ಶಿಫ್ಟ್ ಮಾಡಲು ಹರಸಾಹಸ ಪಡಬೇಕಾಯಿತು. ಬಸ್ ಚಾಲಕನ ಕಾಲಿಗೂ ಗಂಭೀರವಾದ ಗಾಯವಾಗಿದೆ.