Rakshak: ‘ಗುರು ಶಿಷ್ಯರು’ ಚಿತ್ರದ ಇವೆಂಟ್ನಲ್ಲಿ ತಂದೆ ಬಗ್ಗೆ ಮಾತಾಡಿದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್
Guru Shishyaru Kannada Movie: ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರ ರಿಲೀಸ್ಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷತ್ ಕೂಡ ನಟಿಸಿದ್ದಾರೆ.
ಹಾಸ್ಯ ನಟ ಬುಲೆಟ್ ಪ್ರಕಾಶ್ (Bullet Prakash) ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂಬುದು ನೋವಿನ ಸಂಗತಿ. ಅವರನ್ನು ಅಭಿಮಾನಿಗಳು, ಸ್ನೇಹಿತರು ಹಾಗೂ ಕುಟುಂಬದವರು ತುಂಬ ಮಿಸ್ ಮಾಡಿಕೊಳ್ಳುತ್ತಾರೆ. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ (Rakshak) ಕೂಡ ಈಗ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಶರಣ್ ನಟನೆಯ ‘ಗುರು ಶಿಷ್ಯರು’ (Guru Shishyaru) ಸಿನಿಮಾದಲ್ಲಿ ರಕ್ಷಕ್ ಒಂದು ಪಾತ್ರ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಈ ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್ನಲ್ಲಿ ತಂದೆಯನ್ನು ರಕ್ಷಕ್ ನೆನೆದಿದ್ದಾರೆ. ಈ ಸಿನಿಮಾವನ್ನು ಜಡೇಶ್ ಕೆ. ಹಂಪಿ ನಿರ್ದೇಶಿಸಿದ್ದಾರೆ. ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ.
Latest Videos