ಕೇವಲ 15 ದಿನ ಪ್ರಚಾರ ಮಾಡಿಯೂ ನಿಖಿಲ್ ಕುಮಾರಸ್ವಾಮಿ 85,000 ವೋಟು ಪಡೆದಿದ್ದಾನೆ: ಹೆಚ್ ಡಿ ರೇವಣ್ಣ

ಅರುಣ್​ ಕುಮಾರ್​ ಬೆಳ್ಳಿ

Updated on: Nov 27, 2024 | 3:13 PM

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ತಾನ್ಯಾಕೆ ಪ್ರಚಾರ ಹೋಗಲಿಲ್ಲ ಅನ್ನೋದನ್ನು ರೇವಣ್ಣನ ವಿವರಿಸಿದರು. ದೇವಸ್ಥಾನ ಮತ್ತು ಮನೆಯಲ್ಲಿ ಬಿದ್ದು ಎರಡು ಕಡೆ ಫ್ರ್ಯಾಕ್ಚರ್ ಆಗಿದೆ, 2-3 ದಿನಗಳ ಕಾಲ ಕುಮಾರಣ್ಣ ಜೊತೆ ಹೋಗಿದ್ದೆ, ಆದರೆ ನೋವಿನ ಕಾರಣ ಪ್ರಚಾರಕ್ಕೆ ಹೋಗಲಿಲ್ಲ ಎಂದು ರೇವಣ್ಣ ಹೇಳಿದರು.

ಬೆಂಗಳೂರು: ಜೆಡಿಎಸ್ ಪಕ್ಷ ಚನ್ನಪಟ್ಟಣದಲ್ಲಿ ಸೋತಿರುವುದಕ್ಕೆ ಪಕ್ಷ ಗೊಂದಲದ ಗೂಡಾಗಿದೆ ಅಂತ ಹೇಳುವುದು ತಪ್ಪು ಎಂದು ಶಾಸಕ ಹೆಚ್ ಡಿ ರೇವಣ್ಣ ಹೇಳಿದರು. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು, ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ದಯನೀಯ ಸೋಲು ಕಂಡಿಲ್ಲವೇ? ನಿಖಿಲ್ ನನ್ನು ಕುಮಾರಸ್ವಾಮಿ ಬಲಿಪಶು ಮಾಡಿದ್ದಾರೆಂಬ ಮಾತಿಗೆ ಅರ್ಥವೇ ಇಲ್ಲ, ವಿಧಿಯಿಲ್ಲದೆ ಅವನನ್ನು ಸ್ಪರ್ಧೆಗಿಳಿಸಬೇಕಾಯಿತು ಅಂತ ಕುಮಾರಸ್ವಾಮಿ ಹೇಳಿಲ್ಲವೇ? ಕೇವಲ 15 ದಿನ ಪ್ರಚಾರ ಮಾಡಿಯೂ ನಿಖಿಲ್ 85,000 ವೋಟು ಪಡೆದಿದ್ದಾನೆ, ಅದು ಸಾಧನೆಯಲ್ಲವೇ? ಅವನ ಭಾಷಣಗಳನ್ನು ಕೇಳಿದ್ದೇನೆ, ಉತ್ತಮ ಸಂಸದೀಯ ಪಟುಗಳ ಹಾಗೆ ಮಾತಾಡುತ್ತಾನೆ, ಸೋಲಿನಿಂದ ಅವನು ಧೃತಿಗೆಟ್ಟಿಲ್ಲ, ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯ ಅಲ್ಲ ಎಂದು ರೇವಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮಗನನ್ನು ನೋಡಲು ಜೈಲಿಗೆ ಬಂದ ಹೆಚ್ ಡಿ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!

Published on: Nov 27, 2024 03:12 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.