AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನನ್ನು ನೋಡಲು ಜೈಲಿಗೆ ಬಂದ ಹೆಚ್ ಡಿ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!

ಮಗನನ್ನು ನೋಡಲು ಜೈಲಿಗೆ ಬಂದ ಹೆಚ್ ಡಿ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2024 | 5:18 PM

Share

ರೇವಣ್ಣನ ವ್ಯಥೆ, ನೋವು, ಸಂಕಟ ಎಲ್ಲವೂ ಕನ್ನಡಿಗರಿಗೆ ಅರ್ಥವಾಗುತ್ತದೆ, ಇಲ್ಲ ಅಂತೇನಿಲ್ಲ. ತನ್ನ ಇಬ್ಬರೂ ಮಕ್ಕಳು ಲೈಂಗಿಕ ಅಪರಾಧಗಳ ಆರೋಪದಲ್ಲಿ ಜೈಲು ಸೇರಿದರೆ ಯಾವ ತಂದೆ ತಾನೆ ಸಮಾಧಾನದಿಂದ ಇದ್ದಾನು? ರೇವಣ್ಣ ಸಹ ಮಹಿಳೆಯೊಬ್ಬರ ಅಪಹರಣ ಮತ್ತು ಇನ್ನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಅರೋಪಗಳಲ್ಲಿ ಜಾಮೀನು ಪಡೆದು ಜೈಲುವಾಸ ತಪ್ಪಿಸಿಕೊಂಡಿದ್ದಾರೆ.

ಆನೇಕಲ್(ಬೆಂಗಳೂರು): ರಾಜಕಾರಣಿಗಳ ಪ್ರವೃತ್ತಿ ನೋಡಿ ಹೇಗಿದೆ? ತಮಗೆ ಬೇಕಾದಾಗ ಅವರು ಮಾಧ್ಯಮದ ಕೆಮೆರಾಗಳ ಮುಂದೆ ಬಿನಾಕಾ ಸ್ಮೈಲ್ ನೀಡುತ್ತಾ ನಿಲ್ಲುತ್ತಾರೆ. ಬೇಡವಾದಾಗ ಯಾಕ್ರಯ್ಯ ನಮ್ಮ ದುಂಬಾಲು ಬೀಳ್ತೀರಾ? ಅಂತ ಗದರುತ್ತಾರೆ. ಸೋಮವಾರ ಮೈಸೂರಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಹೆಚ್ ಡಿ ರೇವಣ್ಣ ನಗುತ್ತ ಆತ್ಮೀಯತೆಯಿಂದ ಕೇಳಿದ ಪ್ರಶ್ನೆಗಳಿಗೆ ಶಾಂತಚಿತ್ತರಾಗಿ ಉತ್ತರಿಸಿದರು. ನಿಮ್ಮ ಪತ್ನಿ ಭವಾನಿ, ಪ್ರಜ್ವಲ್ ರೇವಣ್ಣರನ್ನು ನೋಡಲು ಬೆಂಗಳೂರಿನ ಸೆಂಟ್ರಲ್ ಜೈಲಿಗೆ ಹೋಗಿದ್ದಾರೆ ನೀವು ಮೈಸೂರಲ್ಲೀದ್ದೀರಲ್ಲ ಸರ್ ಅಂತ ಕೇಳಿದರೆ, ಅವರದ್ದು ಹೆತ್ತ ಕರಳು ಮಗನನ್ನು ನೋಡಬೇಕಿಸುತ್ತದೆ, ಹೋಗಿದ್ದಾರೆ, ನಾನು ಎಲ್ಲ ಭಾರವನ್ನು ದೇವರ ಮೇಲೆ ಹಾಕಿದ್ದೇನೆ ಎಂದಿದ್ದರು. ಆದರೆ ಇವತ್ತು ಖುದ್ದು ಅವರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಕಾರಾಗೃಹಕ್ಕೆ ಬಂದಿದ್ದರು. ಅವರನ್ನು ಕಂಡ ಮಾಧ್ಯಮದವರು ಮಾತಾಡಿಸಲು ಹೋದಾಗ ಅವರು ಗದರಿದರು. ಯಾಕೆ ಸ್ವಾಮಿ? ನಿಮ್ಮ ಮನಸ್ಸಿಗೆ ಬಂದಾಗ ಮಾತಾಡ್ತೀರಿ ಬೇಡವಾದಾಗ ಗದರುತ್ತೀರಾ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ಹೆಚ್ ಡಿ ರೇವಣ್ಣ