ಕುಡುಕ ಆಟೋರಿಕ್ಷಾ ತನ್ನ ಜೊತೆ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂತ ಗದರಿದರು!

ನಿನ್ನ ಬಾಯಿ ವಾಸನೆಯಿಂದಲೇ ನೀನೊಬ್ಬ ಆಟೋರಿಕ್ಷಾ ಡ್ರೈವರ್ ಅಂತ ಗೊತ್ತು ಮಾಡಿಕೊಳ್ಳಬಹುದು ಎಂದು ಈಶ್ವರಪ್ಪ ಹೇಳುತ್ತಾರೆ. ಇಲ್ಲ ಸರ್, ನಿಮ್ಮ ಅನಿಸಿಕೆ ತಪ್ಪು. ಎಲ್ಲ ಆಟೋ ಡ್ರೈವರ್ ಗಳು ಕುಡುಕರಲ್ಲ, ಕುಡಿಯದೆ ಬೀಡಿ ಸಿಗರೇಟು ಸೇದದೆ ನಿಯತ್ತಿನಿಂದ ಸಂಸಾರಕ್ಕಾಗಿ ದುಡಿಯುವ ಅನೇಕ ಅಟೋರಿಕ್ಷಾ ಡ್ರೈವರ್ ಗಳಿದ್ದಾರೆ. ಎಲ್ಲರೂ ಕುಡುಕರು ಅಂದುಕೊಳ್ಳೋದು ಸರಿಯಲ್ಲ.

ಕುಡುಕ ಆಟೋರಿಕ್ಷಾ ತನ್ನ ಜೊತೆ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂತ ಗದರಿದರು!
|

Updated on: Jul 03, 2024 | 6:05 PM

ಚಿತ್ರದುರ್ಗ: ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಹೇಳಬೇಕಾಗಿರೋದನ್ನು ಮುಖದ ಮೇಲೆ ಹೇಳುತ್ತಾರೆ, ಮುಚ್ಚುಮರೆಯೇನೂ ಇಲ್ಲ-ಅದು ಅವರ ರಾಜಕೀಯ ಎದುರಾಳಿಯಾಗಿರಬಹುದು ಅಥವಾ ಅವರೊಂದಿಗೆ ಇಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿರುವ ಜನರಲ್ಲಿನ ಒಬ್ಬ ಆಟೋ ಚಾಲಕ! ಇವತ್ತು ಈಶ್ವರಪ್ಪ ಚಿತ್ರದುರ್ಗದಲ್ಲಿದ್ದರು. ಅಲ್ಲಿನ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಹೊರಡುವಾಗ ಅವರನ್ನು ನೋಡುವ ಕೆಲ ಜನ ಫೋಟೋ ತೆಗಿಸಿಕೊಳ್ಳಲು ಧಾವಿಸುತ್ತಾರೆ. ಅವರಲ್ಲೊಬ್ಬ ಕುಡುಕ ಆಟೋ ಚಾಲಕ. ಫೋಟೋ ತೆಗೆಸಿಕೊಂಡು ದೂರ ಸರಿಯುವಾಗ ಆಟೋ ಚಾಲಕ ಥ್ಯಾಂಕ್ಸ್ ಅಣ್ಣ ಅನ್ನುತ್ತಾನೆ. ಅದಕ್ಕೆ ಈಶ್ವರಪ್ಪ ನಿನ್ನ ಬಾಯಿಂದ ಬರುತ್ತಿರುವ ವಾಸನೆಯಿಂದಲೇ ನೀನೊಬ್ಬ ಅಟೋ ಡ್ರೈವರ್ ಅಂತ ಗೊತ್ತಾಗುತ್ತದೆ ಅನ್ನುತ್ತಾರೆ. ಅದಕ್ಕೆ ಅವನು, ನೋವು ಅಣ್ಣ ಅನ್ನುತ್ತಾನೆ. ಯಾವ ನೋವು? ಕುಡಿತದಿಂದ ನಿನ್ನ ಹೆಂಡತಿಗೆ ನೋವಾಗುತ್ತದೆ ತಾನೇ? ಆಕೆ ಎಲ್ಲಿಗೆ ಹೋಗಬೇಕು? ಅಂತ ಈಶ್ವರಪ್ಪ ಕೇಳುತ್ತಾರೆ. ಇಲ್ಲಣ್ಣ, ಇಲ್ಲಣ್ಣ ಅಂತ ಅವನು ಪೆಪೆಪೆ ಮಾಡುವಾಗ ಈಶ್ವರಪ್ಪ, ಕುಡಿಯೋದನ್ನು ಬಿಡ್ತೀಯಾ ತಾನೆ? ಅನ್ನುತ್ತಾರೆ. ಚಾಲಕ ಹೂಂನಣ್ಣ ಬಿಡ್ತೀನಿ ಅನ್ನುತ್ತಾನೆ. ಏನ್ ಬಿಡ್ತೀಯಾ ನೀನು? ನಿನ್ನ ಜನ್ಮದಲ್ಲಿ ಕುಡಿತ ಬಿಡಕ್ಕಾಗಲ್ಲ ಅನ್ನುತ್ತ ಈಶ್ವರಪ್ಪ ಅಲ್ಲಿಂದ ಹೊರಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ: ಖಾತೆ ತೆರೆದ ಈಶ್ವರಪ್ಪ, ಬಿಎಸ್​ವೈಗೆ ಮುಖಭಂಗ

Follow us
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಈಡಿ ತನಿಖೆ ಸಿಎಂ, ಡಿಸಿಎಂರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ: ವಿಜಯೇಂದ್ರ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್
ದರ್ಶನ್ ನೋಡಲು ಬಂದು ನಿರಾಶರಾಗಿ ತೆರಳಿದ ನಟ ಶ್ರೀಕಿ
ದರ್ಶನ್ ನೋಡಲು ಬಂದು ನಿರಾಶರಾಗಿ ತೆರಳಿದ ನಟ ಶ್ರೀಕಿ
ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಬಾರದ ಬಸ್; ಲೋಕೋಪಯೋಗಿ ಕಚೇರಿಯಲ್ಲೇ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಬಾರದ ಬಸ್; ಲೋಕೋಪಯೋಗಿ ಕಚೇರಿಯಲ್ಲೇ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಭ್ರಷ್ಟಾಚಾರ ತೊಲಗಿಸುತ್ತೇವೆ ಅಂದವರು ಅದರಲ್ಲಿ ಮುಳಗಿದ್ದಾರೆ:ಅಶ್ವಥ್ ನಾರಾಯಣ
ಭ್ರಷ್ಟಾಚಾರ ತೊಲಗಿಸುತ್ತೇವೆ ಅಂದವರು ಅದರಲ್ಲಿ ಮುಳಗಿದ್ದಾರೆ:ಅಶ್ವಥ್ ನಾರಾಯಣ
ಕೊಡಗಿನಲ್ಲಿ ಭಾರಿ ಮಳೆ; ಭಾಗಮಂಡಲ‌ ಭಗಂಡೇಶ್ವರನಿಗೆ ಜಲ‌ ದಿಗ್ಬಂಧನ
ಕೊಡಗಿನಲ್ಲಿ ಭಾರಿ ಮಳೆ; ಭಾಗಮಂಡಲ‌ ಭಗಂಡೇಶ್ವರನಿಗೆ ಜಲ‌ ದಿಗ್ಬಂಧನ
Muharram: ಅಗ್ನಿಕುಂಡದಲ್ಲಿ‌ ಕಂಬಳಿ ಹಾಸಿ ನಮಾಜ್ ಮಾಡಿದ ಹಿಂದೂ ಯುವಕ
Muharram: ಅಗ್ನಿಕುಂಡದಲ್ಲಿ‌ ಕಂಬಳಿ ಹಾಸಿ ನಮಾಜ್ ಮಾಡಿದ ಹಿಂದೂ ಯುವಕ