ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗ ಮಾರ್ಗದಿಂದಲೇ ಚಿಕಿತ್ಸೆ

ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗ ಮಾರ್ಗದಿಂದಲೇ ಚಿಕಿತ್ಸೆ

ಅಶೋಕ್​ ಪೂಜಾರಿ, ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Jul 03, 2024 | 5:15 PM

ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿತವಾಗಿ ಇಬ್ಬರು ಕೂಲಿ ಕಾರ್ಮಿಕರು ಸಿಲುಕಿಕೊಂಡಿದ್ದರು. ಓರ್ವ ಕೂಲಿ ಕಾರ್ಮಿಕನ ರಕ್ಷಣೆ ಮಾಡಲಾಗಿದ್ದು, ಮತ್ತೊಬ್ಬನಿಗಾಗಿ ರಕ್ಷಣಾ ಕಾರ್ಯಚರಣೆ ನಡೆದಿದೆ. ಮಂಗಳೂರು ನಗರದ ಬಲ್ಮಠ ಎಂಬಲ್ಲಿ ದುರಂತ ಸಂಭವಿಸಿದೆ. ಸದ್ಯ ಕಾರ್ಮಿಕನ ಕೈ ಕಾಣುತ್ತಿರುವುದರೊಂದಿಗೆ ಕಾರ್ಯಾಚರಣೆ ಮಧ್ಯೆಯೇ ಜಿಲ್ಲಾ ಆರೋಗ್ಯಾಧಿಕಾರಿ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ.

ದಕ್ಷಿಣ ಕನ್ನಡ, ಜುಲೈ 03: ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು (landslide) ಇಬ್ಬರು ಕೂಲಿ ಕಾರ್ಮಿಕರು (Labourer) ಮಣ್ಣಿನಡಿ ಸಿಲುಕಿರುವಂತಹ ಘಟನೆ ಮಂಗಳೂರು ನಗರದ ಬಲ್ಮಠ ಎಂಬಲ್ಲಿ ಸಂಭವಿಸಿದೆ. ಎಸ್​ಡಿಆರ್​ಎಫ್​, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಓರ್ವ ಕಾರ್ಮಿಕನ ರಕ್ಷಣೆ ಮಾಡಲಾಗಿದ್ದು, ಮತ್ತೋರ್ವನಿಗಾಗಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಎಸ್​ಡಿಆರ್​ಎಫ್ ತಂಡ ಕೊರೆದ ಸುರಂಗದಲ್ಲಿ  ಮಣ್ಣಿನಡಿ ಸಿಲುಕಿರುವ ಕಾರ್ಮಿಕ ಚಂದನ್ ಕೈ ಹೊರ ಭಾಗಕ್ಕೆ ಕಾಣಿಸಿದೆ. ಕಾರ್ಯಾಚರಣೆ ಮಧ್ಯೆಯೇ ಜಿಲ್ಲಾ ಆರೋಗ್ಯಾಧಿಕಾರಿ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಪಲ್ಸ್ ಮೀಟರ್ ಮೂಲಕ ಆರೋಗ್ಯ ತಪಾಸಣೆ ಮಾಡಲಾಗಿದ್ದು, ರಕ್ತದೊತ್ತಡದ ಸಮಸ್ಯೆಯಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಸದ್ಯ ಡ್ರಿಪ್ಸ್ ಹಾಗೂ ಆಕ್ಸಿಜನ್ ನೀಡುವ ಮೂಲಕ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಬಳಸಿ ಚಿಕಿತ್ಸೆ ಮುಂದುವರಿದಿದೆ. ಕಳೆದ ಎರಡೂವರೆ ಗಂಟೆಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮತ್ತು ಡಿ.ಸಿ ಮುಲ್ಲೈ ಮುಗಿಲನ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಘಟನೆ ಕುರಿತು‌ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿದ್ದು, ಘಟನೆ ಮಧ್ಯಾಹ್ನ 12:30ಕ್ಕೆ ನಡೆದಿದೆ. ಎರಡು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಫ್ಲೈವುಡ್ ಮೇಲೆ ಮಣ್ಣು ಬಿದ್ದು ಅದರಡಿ ಸಿಲುಕಿಕೊಂಡಿದ್ದರು. ಫ್ಲೈ ವುಡ್ ಇದ್ದ ಕಾರಣ ಒಬ್ಬರನ್ನು ಸ್ವಲ್ಪ ಹೊತ್ತಿನಲ್ಲೇ ರಕ್ಷಣೆ ಮಾಡಿದ್ದೇವೆ. ರಕ್ಷಣೆ ಮಾಡಿದವರ ಆರೋಗ್ಯ ಸ್ಥಿರವಾಗಿದೆ. ಇನ್ನೊಬ್ಬರ ರಕ್ಷಣಾ ಕಾರ್ಯಾಚರಣೆಯು ನಡೆಯುತ್ತಿದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Published on: Jul 03, 2024 05:12 PM