ಟೋಲ್ ಶುಲ್ಕ ವಿರೋಧಿಸಿ ಕಣಮಿಣಿಕೆ ಟೋಲ್ ಪ್ಲಾಜಾ ಬಳಿ ಯುವ ಜೆಡಿಎಸ್ ಮುಷ್ಕರ, ಅಧಿಕಾರಿ ಮಾತಿಗೆ ಸೊಪ್ಪು ಹಾಕದ ನಿಖಿಲ್ ಕುಮಾರಸ್ವಾಮಿ

|

Updated on: Mar 16, 2023 | 5:57 PM

ಶ್ರೀಧರ್ ಅವರ ಓಲೈಕೆಯ ಮಾತುಗಳಿಗೆ ಸೊಪ್ಪುಹಾಕದ ನಿಖಿಲ್, ಏನೇ ಹೇಳೋದಿದ್ರೂ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಬಂದು ಜನರ ಮುಂದೆ ಹೇಳಿ ಅಂತ ತಾಕೀತು ಮಾಡಿದರು.

ರಾಮನಗರ: ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಸಂಗ್ರಹಿಸಲಾಗುತ್ತಿರುವ ಟೋಲ್ ವಿರೋಧಿಸಿ ಜೆಡಿಎಸ್ ಪಕ್ಷದ ಯುವಮೋರ್ಚಾದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ರಾಮನಗರದ ಕಣಮಿಣಿಕೆ ಟೋಲ್ ಪ್ಲಾಜಾ (Kanaminike toll plaza) ಪ್ರತಿಭಟನೆ ನಡೆಸಲಾಯಿತು. ಮುಷ್ಕರದಿಂದಾಗಿ ಟೋಲ್ ಗೇಟ್ ಬಳಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. ಪ್ರತಿಭಟನೆ ನಿಲ್ಲಿಸಲು ಬಂದ ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ವಾಗ್ವಾದ ಕೂಡ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿಟಿ ಶ್ರೀಧರ್, ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಫೋನಲ್ಲಿ ಮಾತಾಡಿದರು. ಅವರ ಓಲೈಕೆಯ ಮಾತುಗಳಿಗೆ ಸೊಪ್ಪುಹಾಕದ ನಿಖಿಲ್, ಏನೇ ಹೇಳೋದಿದ್ರೂ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಬಂದು ಜನರ ಮುಂದೆ ಹೇಳಿ ಅಂತ ತಾಕೀತು ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ