ಸಿಎಂ ಸಿದ್ದರಾಮಯ್ಯರನ್ನ ಅಣಕ ಮಾಡಿ ತೋರಿಸಿದ ನಿಖಿಲ್ ಕುಮಾರಸ್ವಾಮಿ; ಇಲ್ಲಿದೆ ವಿಡಿಯೋ

ಸಿಎಂ ಸಿದ್ದರಾಮಯ್ಯರನ್ನ ಅಣಕ ಮಾಡಿ ತೋರಿಸಿದ ನಿಖಿಲ್ ಕುಮಾರಸ್ವಾಮಿ; ಇಲ್ಲಿದೆ ವಿಡಿಯೋ

ಕಿರಣ್ ಹನುಮಂತ್​ ಮಾದಾರ್
|

Updated on: Mar 31, 2024 | 5:25 PM

ಇಂದು(ಮಾ.31) ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ನುಡಿದಂತೆ ನಡೆದಿದ್ದೇವೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ(Siddaramaiah)ನವರನ್ನು ಅನುಕರಣೆ ಮಾಡಿದ್ದಾರೆ.

ಮಂಡ್ಯ, ಮಾ.31: ನುಡಿದಂತೆ ನಡೆದಿದ್ದೇವೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ(Siddaramaiah)ನವರನ್ನು ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅಣುಕಿಸಿದ್ದಾರೆ. ಇಂದು(ಮಾ.31) ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆದಾಗ ಬರಗಾಲ ಬಂದಿದೆ. ಈಗಾಗಲೇ 800ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಕಾಂಗ್ರೆಸ್​ ಅವರು ಪ್ರತಿ ಜಿಲ್ಲೆಯಲ್ಲಿ ಐದು ಗ್ಯಾರಂಟಿಗಳ ಸಭೆ ಮಾಡಿಕೊಂಡು 4 ರಿಂದ 5 ಕೋಟಿ ದುಂದುವೆಚ್ಚ ಮಾಡುತ್ತಿದ್ದಾರೆ. ಜೊತೆಗೆ ಪತ್ರಿಕೆಗಳಲ್ಲಿ ಪೇಜುಗಟ್ಟಲೇ ಜಾಹೀರಾತು ನೀಡುತ್ತಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರ ಅನುಕರಣೆ ಮಾಡಿ, ನುಡಿದಂತೆ  ನಡೆದಿದ್ದೇವೆ ಎಂದು ಹೇಳುವ ಮೂಲಕ ಅಣುಕಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ