Nikhil Kumaraswamy: ಮಗುವನ್ನು ಎತ್ತಿ ಮುದ್ದಾಡಿದ ನಿಖಿಲ್; ಪುತ್ರ ಹೇಗಿದ್ದಾನೆ?

Edited By:

Updated on: Sep 24, 2021 | 2:51 PM

H.D.Kumaraswamy: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಗಂಡು ಮಗುವಿನ ಜನ್ಮವಾಗಿದ್ದು, ನಿಖಿಲ್ ಮಗುವನ್ನು ಎತ್ತಿಕೊಂಡಿರುವ ದೃಶ್ಯಗಳು ಎಲ್ಲರ ಮನಗೆದ್ದಿದೆ.

ಸ್ಯಾಂಡಲ್​ವುಡ್ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೇವತಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗುಉ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ನಿಖಿಲ್ ಕುಮಾರಸ್ವಾಮಿ ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿರುವ ದೃಶ್ಯ ವೈರಲ್ ಆಗಿದ್ದು, ಅಭಿಮಾನಿಗಳು ಅದನ್ನು ನೋಡಿ ಪುಳಕಿತಗೊಂಡಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿರುವುದರ ಕುರಿತು ನಿಖಿಲ್ ತಂದೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಸ ಹಂಚಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರ ಮೊಮ್ಮಗನಾಗಿರುವ ನಿಖಿಲ್ ಕುಮಾರಸ್ವಾಮಿ ಪ್ರಸ್ತುತ ‘ರೈಡರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಜೊತೆಗೆ ರಾಜಕೀಯದಲ್ಲೂ ಅವರು ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ:

ನಿಖಿಲ್​ ಕುಮಾರಸ್ವಾಮಿಗೆ ಗಂಡು ಮಗು; ಖುಷಿಪಟ್ಟ ಕುಮಾರಸ್ವಾಮಿ ಕುಟುಂಬ

ಮುದ್ದಾದ ಮಗುವಿನ ಜತೆ ಪೋಸ್​​ ಕೊಟ್ಟ ನಿಖಿಲ್​ ಕುಮಾರಸ್ವಾಮಿ; ಇಲ್ಲಿವೆ ಫೋಟೋಗಳು

ತಾತನಾದ ಕುಮಾರಸ್ವಾಮಿ; ನಿಖಿಲ್​-ರೇವತಿಗೆ ಗಂಡು ಮಗು

(Nikhil Kumaraswamy poses with his baby boy video is here)