ನೇಹಾ ಕೊಲೆಯಾದ ದಿನದಿಂದ ಇವತ್ತಿನವರೆಗೆ ನನ್ನ ಹೇಳಿಕೆ ಮತ್ತು ನಿಲುವಿನಲ್ಲಿ ಬದಲಾವಣೆ ಇಲ್ಲ: ನಿರಂಜನ್ ಹಿರೇಮಠ

|

Updated on: Apr 25, 2024 | 3:54 PM

ಕೊಲೆ ಮಾಡುವ ಮೊದಲು ಕೆಲ ದಿನಗಳ ಕಾಲ ಫಯಾಜ್ ತಮ್ಮ ಮನೆ ಬಳಿ ಸುಳಿದಾಡಿದ್ದನ್ನು ನೆರೆಹೊರೆಯವರು ನೋಡಿದ್ದಾರೆ ಎಂದ ನಿರಂಜನ್ ತಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುವುದಾಗಿ ಹೇಳಿದರು.

ಹುಬ್ಬಳ್ಳಿ: ಸಿಐಡಿ ಅಧಿಕಾರಿಗಳು ಮನೆಗೆ ಬಂದು ಹೋದ ಬಳಿಕ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ (Niranjan Hiremath), ಅಧಿಕಾರಿಗಳು ಒಂದಷ್ಟು ಮಾಹಿತಿ ತಮ್ಮಿಂದ ಸಂಗ್ರಹಿಸಿಕೊಂಡು ಹೋಗಿದ್ದಾರೆ ಅದರೆ ಅದನ್ನೆಲ್ಲ ಮಾಧ್ಯಮಗಳ ಮುಂದೆ ಬಹಿರಂಗಪಡಿಲಾಗಲ್ಲ ಎಂದು ಹೇಳಿದರು. ನೇಹಾ ಕೊಲೆಯಾದ ಮೊದಲೆರಡು ದಿನಗಳ ಕಾಲ ಮಾಧ್ಯಮಗಳೊಂದಿಗೆ ಮಾತಾಡುವಾಗ ಅವರು ತಮ್ಮ ಪಕ್ಷದ ನಾಯಕರನ್ನೇ ತೆಗಳುತ್ತಿದ್ದರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ನೇಹಾ ಹತ್ಯೆಯ ಬಗ್ಗೆ ನೀಡಿದ ಹೇಳಿಕೆಗಳ ಬಗ್ಗೆ ಅಸಹನೆ ಮತ್ತು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅದರೆ, ಈಗ ಅವರು ಬೇರೆ ರೀತಿ ಮಾತಾಡುತ್ತಿದ್ದಾರೆ. ಈ ಅಂಶವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಆಗಿರುವ ನಿರಂಜನ ಗಮನಕ್ಕೆ ತಂದಾಗ ಆರೋಪವನ್ನು ಅಲ್ಲಗಳೆದರು. ನೇಹಾ ಕೊಲೆಯಾದ ದಿನದಿಂದ ತಮ್ಮ ಹೇಳಿಕೆಯಾಗಲೀ ಅಥವಾ ನಿಲುವಾಗಲೀ ಬದಲಾಗಿಲ್ಲ. ತನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು, ಪೊಲೀಸರು ಪ್ರಕರಣದ ಆಳಕ್ಕೆ ಇಳಿದು ತನಿಖೆ ಮಾಡಬೇಕು ಮತ್ತು ಹತ್ಯೆ ಹಿಂದಿನ ಷಡ್ಯಂತ್ರವನ್ನು ಬಯಲು ಮಾಡಬೇಕು ಅನ್ನೋದು ತಮ್ಮ ಕುಟುಂದ ಉದ್ದೇಶವಾಗಿದೆ ಎಂದರು. ಕೊಲೆ ಮಾಡುವ ಮೊದಲು ಕೆಲ ದಿನಗಳ ಕಾಲ ಫಯಾಜ್ ತಮ್ಮ ಮನೆ ಬಳಿ ಸುಳಿದಾಡಿದ್ದನ್ನು ನೆರೆಹೊರೆಯವರು ನೋಡಿದ್ದಾರೆ ಎಂದ ನಿರಂಜನ್ ತಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಫಯಾಜ್ ತಂದೆತಾಯಿ ಕ್ಷಮೆ ಕೇಳಿದರೆ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆಯೇ? ನಿರಂಜನ ಹಿರೇಮಠ

Follow us on