AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಯಾಜ್ ತಂದೆತಾಯಿ ಕ್ಷಮೆ ಕೇಳಿದರೆ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆಯೇ? ನಿರಂಜನ ಹಿರೇಮಠ

ಫಯಾಜ್ ತಂದೆತಾಯಿ ಕ್ಷಮೆ ಕೇಳಿದರೆ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆಯೇ? ನಿರಂಜನ ಹಿರೇಮಠ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 20, 2024 | 1:38 PM

Share

ಅವನ ತಂದೆ ತಾಯಿಗಳು ವಿದ್ಯಾವಂತರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು, ಅವರಿಗೆ ತಮ್ಮ ಮಗ ವಿಕೃತಿ ಮನಸ್ಥಿತಿಯವನು ಅಂತ ಗೊತ್ತಿತ್ತು, ಆ ಸಂಗತಿಯನ್ನು ಅವರು ನಮ್ಮಿಂದ ಮುಚ್ಚಿಟ್ಟಿದ್ದರು, ನಮ್ಮ ಗಮನಕ್ಕೆ ಅದನ್ನು ತಂದಿದ್ದರೆ ಮಗಳ ಬಾಳು ಹೀಗೆ ದುರಂತ ಅಂತ್ಯ ಕಾಣುತ್ತಿರಲಿಲ್ಲ ಎಂದು ನಿರಂಜನ ಹೇಳಿದರು.

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ನೇಹಾ ಹಿರೇಮಠ (Neha Hiremath) ತಂದೆ ನಿರಂಜನ ಹಿರೇಮಠ (Niranjan Hiremath) ಅವರು, ತಮ್ಮ ಮಗಳನ್ನು ಹತ್ಯೆಗೈದ ಫಯಾಜ್ (Fayaz) ಯಾವತ್ತೂ ಮದುವೆಯಾಗುವ ಪ್ರಸ್ತಾಪ ತೆಗೆದುಕೊಂಡು ತಮ್ಮ ಮನೆಗೆ ಬಂದಿರಲಿಲ್ಲ, ಎಲ್ಲ ಮುಗಿದುಹೋದ ಮೇಲೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು. ಅವನ ತಂದೆ ತಾಯಿಗಳು ವಿದ್ಯಾವಂತರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು, ಅವರಿಗೆ ತಮ್ಮ ಮಗ ವಿಕೃತಿ ಮನಸ್ಥಿತಿಯವನು ಅಂತ ಗೊತ್ತಿತ್ತು, ಆ ಸಂಗತಿಯನ್ನು ಅವರು ನಮ್ಮಿಂದ ಮುಚ್ಚಿಟ್ಟಿದ್ದರು, ನಮ್ಮ ಗಮನಕ್ಕೆ ಅದನ್ನು ತಂದಿದ್ದರೆ ಮಗಳ ಬಾಳು ಹೀಗೆ ದುರಂತ ಅಂತ್ಯ ಕಾಣುತ್ತಿರಲಿಲ್ಲ ಎಂದು ನಿರಂಜನ ಹೇಳಿದರು. ಫಯಾಜ್ ತಂದೆ ತಾಯಿಗಳು ಕ್ಷಮೆ ಕೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ಕ್ಷಮೆಯಿಂದ ಈಗ ಆಗೋದಾದರೂ ಏನು? ಅದರಿಂದ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆಯೆ? ಅವಳು ಬದುಕಿ ಬರುತ್ತಾಳೆಯೇ? ಎಂದು ನಿರಂಜನ ಪ್ರಶ್ನಿಸಿದರು. ತನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಫಯಾಜ್ ತಂದೆತಾಯಿಗಳು ಅವನನ್ನು ಜಾಮೀನಿನ ಮೇಲೆ ಹೊರತಂದು ಅವನು ನೇಹಾಳನ್ನು ಬೀಕರವಾಗಿ ಇರಿದು ಕೊಂದಂತೆಯೇ ಅವನನ್ನೂ ಕೊಲ್ಲಬೇಕು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ:   ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಆಘಾತದಿಂದ ಚೇತರಿಸಿಕೊಳ್ಳದ ತಂದೆತಾಯಿಗೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More