Master Anand: ಮಾಸ್ಟರ್ ಆನಂದ್-ಯಶಸ್ವಿನಿ ವಿರುದ್ಧ ನಿಶಾ ನರಸಪ್ಪ ಸರಣಿ ಆರೋಪ

|

Updated on: Jul 30, 2023 | 10:34 PM

Vamshika: ಬಾಲನಟಿ ವಂಶಿಕಾ ಹೆಸರು ಹೇಳಿ ವಂಚನೆ ಮಾಡಿರುವ ಆರೋಪ ಹೊತ್ತಿರುವ ನಿಶಾ ನರಸಪ್ಪ, ಸುದ್ದಿಗೋಷ್ಠಿ ನಡೆಸಿ ವಂಶಿಕಾ ಪೋಷಕರಾದ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ವಿರುದ್ಧ ಆರೋಪಗಳನ್ನು ಮಾಡಿದರು.

ಮಾಸ್ಟರ್ ಆನಂದ್ (Master Anand), ಯಶಸ್ವಿನಿ ಪುತ್ರಿ ವಂಶಿಕಾ (Vamshika) ಹೆಸರು ಹೇಳಿ ಹಲವರಿಗೆ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿರುವ ಆರೋಪ ಹೊತ್ತಿರುವ ಯುವತಿ ನಿಶಾ ನರಸಪ್ಪ ಸುದ್ದಿಗೋಷ್ಠಿ ನಡೆಸಿ ತಮ್ಮ ಮೇಲಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದರು. ಜೊತೆಗೆ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿನ ವಿರುದ್ಧ ಸರಣಿ ಆರೋಪಗಳನ್ನು ಮಾಡಿದರು. ತಮ್ಮಿಂದ ಸಾಕಷ್ಟು ಹಣ ಪಡೆದು ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ತಮ್ಮ ಪುತ್ರಿ ವಂಶಿಕಾರನ್ನು ಇವೆಂಟ್​ಗಳಿಗೆ ಕಳಿಸುತ್ತಿದ್ದರು. ನಾನು ಕರೆಯದ ಇವೆಂಟ್​ಗೂ ಒಮ್ಮೆ ಯಶಸ್ವಿನಿ ಬಂದಿದ್ದರು ಎಂದು ನಿಶಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ