Nisha Narasappa: ವಂಚನೆ ಆರೋಪಕ್ಕೆ ನಿಶಾ ನರಸಪ್ಪ ತಿರುಗೇಟು; ಬೇರೆಯದೇ ವಿಷಯ ಬಹಿರಂಗ ಮಾಡಿದ ನಿಶಾ

|

Updated on: Jul 30, 2023 | 9:52 AM

ಇಷ್ಟೆಲ್ಲ ವಿವಾದಕ್ಕೆ ಹರ್ಷಿತಾ ಎಂಬುವವರು ಕಾರಣ ಎಂದು ನಿಶಾ ನರಸಪ್ಪ ತಿಳಿಸಿದ್ದಾರೆ. ಹರ್ಷಿತಾ ಯಾರು? ತಮ್ಮ ಮೇಲೆ ಆಕೆ ನಡೆಸಿದ ಪಿತೂರಿ ಏನು ಎಂಬುದನ್ನು ನಿಶಾ ವಿವರಿಸಿದ್ದಾರೆ.

ಸೆಲೆಬ್ರಿಟಿಗಳ ಹೆಸರು ಹೇಳಿಕೊಂಡು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ನಿಶಾ ನರಸಪ್ಪ (Nisha Narasappa) ವಿರುದ್ಧ ಆರೋಪ ಕೇಳಿಬಂದಿತ್ತು. ಮಾಸ್ಟರ್​ ಆನಂದ್​ ಮತ್ತು ಯಶಸ್ವಿನಿ ಅವರ ಪುತ್ರಿ ವಂಶಿಕಾ (Vanshika Anjani Kashyapa) ಹೆಸರನ್ನು ಬಳಸಿಕೊಂಡು ಕೂಡ ಮೋಸ ನಡೆದಿದೆ ಎಂದು ಹೇಳಲಾಗಿತ್ತು. ಆ ಕೇಸ್​ (Cheating Case) ಸಂಬಂಧ ನಿಶಾ ನರಸಪ್ಪ ಅರೆಸ್ಟ್​ ಆಗಿದ್ದರು. ಬಳಿಕ ಜಾಮೀನು ಪಡೆದು ಹೊರಬಂದರು. ಈಗ ಅವರು ಮಾಧ್ಯಮಗಳ ಎದುರು ಬಂದಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ನಿಶಾ ಹೇಳಿದ್ದಾರೆ. ಇಷ್ಟೆಲ್ಲ ವಿವಾದಕ್ಕೆ ಹರ್ಷಿತಾ ಎಂಬುವವರು ಕಾರಣ ಎಂದು ನಿಶಾ ತಿಳಿಸಿದ್ದಾರೆ. ಹರ್ಷಿತಾ ಯಾರು? ತಮ್ಮ ಮೇಲೆ ಹರ್ಷಿಕಾ ನಡೆಸಿದ ಪಿತೂರಿ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.