Daily Horoscope: ಈ ರಾಶಿಯವರ ಜೀವನಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ

|

Updated on: Mar 09, 2024 | 7:43 AM

ಜ್ಯೋತಿಷ್ಯದ ಪ್ರಕಾರ, ನಮ್ಮ ದೈನಂದಿನ ಜೀವನವು ಗ್ರಹಗಳ ಚಲನ-ವಲನಗಳಿಂದ ಪ್ರಭಾವಿತವಾಗಿದೆ. ಇಂದಿನ ಗ್ರಹಗಳ ಚಲನವಲನ ಹೇಗಿದೆ? ಇಂದಿನ ರಾಶಿ ಭವಿಷ್ಯವೇನು? ಇಂದಿನ ಅಥವಾ ನಾಳೆಯ ಜಾತಕವನ್ನು ಹುಡುಕುತ್ತಿರುವಿರಾ? ಈ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ನಿಮ್ಮ ದಿನವನ್ನು ಯೋಜಿಸಲು ನೀವು ಬಳಸಬಹುದಾದ ಮಾರ್ಗಗಳಲ್ಲಿ ದೈನಂದಿನ ಜಾತಕವೂ ಒಂದು. ಜ್ಯೋತಿಷ್ಯದ ಪ್ರಕಾರ, ನಮ್ಮ ದೈನಂದಿನ ಜೀವನವು ಗ್ರಹಗಳ ಚಲನೆಗಳಿಂದ ಪ್ರಭಾವಿತವಾಗಿದೆ. ಏಕೆಂದರೆ ಅವು ನಿರಂತರವಾಗಿ ತಮ್ಮ ಸ್ಥಾನಗಳನ್ನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಬದಲಾಯಿಸುತ್ತವೆ. ಈ ಚಲನವು ಒಬ್ಬರ ಜೀವನದಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಪ್ರಭಾವಗಳನ್ನು ತರಬಹುದು, ಮತ್ತು ಅಂತಹ ವಿಷಯಗಳನ್ನು ಮುಂಚಿತವಾಗಿ ತಿಳಿದಿರುವುದು ಅನಿಶ್ಚಿತತೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಇಂದಿನ ಗ್ರಹಗಳ ಚಲನವಲನ ಹೇಗಿದೆ? ಇಂದಿನ ರಾಶಿ ಭವಿಷ್ಯವೇನು? ಇಂದಿನ ಅಥವಾ ನಾಳೆಯ ಜಾತಕವನ್ನು (Horoscope) ಹುಡುಕುತ್ತಿರುವಿರಾ? ಈ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ಹೇಳಿದ್ದಾರೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶಿವ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:44 ರಿಂದ 11:14 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:13 ರಿಂದ 03:42 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:15 ರಿಂದ 08:15ರ ವರೆಗೆ.