ಜೈ ಮಹಾರಾಷ್ಟ್ರ ಎಂದವನಿಗೆ ಬುದ್ಧಿವಾದ ಹೇಳಿದ್ದಕ್ಕೆ ಉದ್ಯಮಿ ಮೇಲೆ ಎಂಇಎಸ್ ಪುಂಡರಿಂದ ಹಲ್ಲೆಗೆ ಯತ್ನ

ಜೈ ಮಹಾರಾಷ್ಟ್ರ ಎಂದವನಿಗೆ ಬುದ್ಧಿವಾದ ಹೇಳಿದ್ದಕ್ಕೆ ಉದ್ಯಮಿ ಮೇಲೆ ಎಂಇಎಸ್ ಪುಂಡರಿಂದ ಹಲ್ಲೆಗೆ ಯತ್ನ

Sahadev Mane
| Updated By: ವಿವೇಕ ಬಿರಾದಾರ

Updated on: Mar 09, 2024 | 9:41 AM

ಬೆಳಗಾವಿ ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಈ ವೇಳೆ ಮೈಕ್​ನಲ್ಲಿ ಜೈ ಶಿವಾಜಿ, ಜೈ ಮಹಾರಾಷ್ಟ್ರಎಂದು ಕುಸ್ತಿಪಟು ಘೋಷಣೆ ಕೂಗಿದನು. ಕೂಡಲೆ ಉದ್ಯಮಿ ಶ್ರೀಕಾಂತ್ ಕುಸ್ತಿಪಟುವಿನ ಕೈಯಿಂದ ಮೈಕ್ ಕಿತ್ತುಕೊಂಡಿದ್ದಾರೆ. ಮುಂದೇನಾಯ್ತು ಈ ವಿಡಿಯೋ ನೋಡಿ

ಬೆಳಗಾವಿ, ಮಾರ್ಚ್​​ 09: ಬೆಳಗಾವಿ (Belagavi) ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಈ ವೇಳೆ ಮೈಕ್​ನಲ್ಲಿ ಜೈ ಶಿವಾಜಿ, ಜೈ ಮಹಾರಾಷ್ಟ್ರ (Maharashtra) ಎಂದು ಕುಸ್ತಿಪಟು ಘೋಷಣೆ ಕೂಗಿದನು. ಉದ್ಯಮಿ ಶ್ರೀಕಾಂತ್ ತಕ್ಷಣ ಕುಸ್ತಿಪಟುವಿನಿಂದ ಮೈಕ್ ಕಿತ್ತುಕೊಂಡಿದ್ದಾರೆ. ನಾವು ಒಂದೇ ನಾಡಿನ ಮಕ್ಕಳು, ನಾವೆಲ್ಲ ಸಹೋದರರಂತೆ. ಇಷ್ಟೇ ಅಲ್ಲದೆ ನೀನು ಸಮಸ್ಯೆ ಸೃಷ್ಟಿ ಮಾಡುತ್ತಿದ್ದೀಯಾ ಎಂದು ಬುದ್ದಿವಾದ ಹೇಳಿದರು. ಈ ವೇಳೆ ಎಂಇಎಸ್ (MES)​ ಪುಂಡರು ಶ್ರೀಕಾಂತ ಅವರ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ವಾಗ್ವಾದ ತಾರಕಕ್ಕೆ ಏರಿದ್ದು, ಎಂಇಎಸ್​ ಪುಂಡರು ಶ್ರೀಕಾಂತ್​ ಅವರಿಗೆ ಗೂಂಡಾ ವರ್ತನೆ ತೋರಿಸಿದ್ದಾರೆ. ಬಳಿಕ ಶ್ರೀಕಾಂತ್​ ಅವರು ಗುಂಪು ಕಟ್ಟಿಕೊಂಡು ಕನ್ನಡಕ್ಕೆ ಜೈ ಎಂದಿದ್ದಾರೆ. ಇದಕ್ಕೆ ಎಂಇಎಸ್ ಪುಂಡರು ಶ್ರೀಕಾಂತ್​ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇನ್ನು ಎಂಇಎಸ್​ ಪುಂಡರ ಅಟ್ಟಾಹಸ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.