ಗಡ್ಕರಿಗೆ ಜೀವ ಬೆದರಿಕೆ ಕೇಸ್: ಉಗ್ರ ಅಕ್ಬರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ನಾಗ್ಪುರ್ ಪೊಲೀಸರ ವಶದಲ್ಲಿರುವ ಮೋಸ್ಟ್ ವಾಂಟೆಡ್ ಉಗ್ರ ಅಕ್ಬರ್ ಪಾಷಾನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಉಗ್ರ ಕಳೆದ ವರ್ಷ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ್ದನು.
ಬೆಳಗಾವಿ, ಆಗಸ್ಟ್ 27: ಮೋಸ್ಟ್ ವಾಂಟೆಡ್ ಉಗ್ರ ಅಕ್ಬರ್ ಪಾಷಾ ಹಿಂಡಲಗಾ ಜೈಲಿಗೆ (Hindalaga Jail) ಶಿಫ್ಟ್ ಮಾಡಲಾಗಿದೆ. ಉಗ್ರ ಅಕ್ಬರ್ ಪಾಷಾ ಮತ್ತು ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಜೊತೆಗೂಡಿ ಕಳೆದ ವರ್ಷ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು. 10 ಕೋಟಿ ರೂ. ಕೊಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಹೇಳಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಹಾರಾಷ್ಟ್ರದ ನಾಗ್ಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಸಂಬಂಧ ನಾಗ್ಪುರ ಠಾಣೆ ಪೊಲೀಸರು ಉಗ್ರ ಅಕ್ಬರ್ ಪಾಷಾನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ, ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಮತ್ತು ಅಕ್ಬರ್ ಪಾಷ್ ನಡುವೆ ಲಿಂಕ್ ಇರುವುದು ಬೆಳಕಿಗೆ ಬಂದಿದೆ. ನಂತರ ಇಬ್ಬರನ್ನು ವಿಚಾರಣೆ ಬಳಿಕ ಇದೀಗ ನಾಗ್ಪುರ ಪೊಲೀಸರು ಉಗ್ರ ಅಕ್ಬರ್ ಪಾಷಾನನ್ನು ಮತ್ತೆ ಬೆಳಗಾವಿಗೆ ಶಿಫ್ಟ್ ಮಾಡಿದ್ದಾರೆ.
ಬೆಳಗಾವಿಯ ಇದೇ ಹಿಂಡಲಾಗ ಜೈಲಿಗೆ ಕೊಲೆ ಆರೋಪಿ ನಟ ದರ್ಶನ್ ಮತ್ತು ಇತರರನ್ನು ಶಿಫ್ಟ್ ಮಾಡುವ ಸಾಧ್ಯತೆ ಇದೆ. ದರ್ಶನ್ ಅವರನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಬೇಕಾದರೆ ನ್ಯಾಯಾಲಯದ ಅನುಮತಿ ಅವಶ್ಯಕತೆ ಇದೆ. ಹೀಗಾಗಿ ಶಿಫ್ಟ್ ಸ್ವಲ್ಪ ತಡವಾಗುವ ಸಾಧ್ಯತೆ ಇದೆ. ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದಕ್ಕಾಗಿ ದರ್ಶನ್ ಅವರ ಮೇಲೆ ಮತ್ತೆ ಎರಡು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಹಿಂಡಲಗಾ ಜೈಲ್: ದರ್ಶನ್ ಶಿಫ್ಟ್ ಆಗಲಿರುವ 101 ವರ್ಷ ಇತಿಹಾಸದ ಕಾರಾಗೃಹದ ಬಗ್ಗೆ ನಿಮಗೆಷ್ಟು ಗೊತ್ತು?
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ