AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾ: ವೈದ್ಯೆ ಮೇಲೆ ಅತ್ಯಾಚಾರ ನಡೆದ ಸೆಮಿನಾರ್​ ಹಾಲ್​ನಲ್ಲಿ ಜನಜಂಗುಳಿ, ಯಾರಿವರು?

ಕೋಲ್ಕತ್ತಾ: ವೈದ್ಯೆ ಮೇಲೆ ಅತ್ಯಾಚಾರ ನಡೆದ ಸೆಮಿನಾರ್​ ಹಾಲ್​ನಲ್ಲಿ ಜನಜಂಗುಳಿ, ಯಾರಿವರು?

ನಯನಾ ರಾಜೀವ್
|

Updated on: Aug 27, 2024 | 9:35 AM

Share

ಕೋಲ್ಕತ್ತಾದ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಈ ಹೊತ್ತಲ್ಲೇ ಅತ್ಯಾಚಾರ ನಡೆದ ಸೆಮಿನಾರ್​ ಹಾಲ್​ ಜನರಿಂದ ತುಂಬಿ ತುಳುಕುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಾಗಾದರೆ ಅವರೆಲ್ಲಾ ಏಕೆ ಅಲ್ಲಿಗೆ ಬಂದರು, ಕ್ರೈಂ ಸೀನ್​ನಲ್ಲಿ ಅವರಿಗೇನು ಕೆಲಸ ಇದರ ಹಿಂದೆ ಯಾರಿದ್ದಾರೆ ಎನ್ನುವ ಪ್ರಶ್ನೆಗಳೆದ್ದಿವೆ.

ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ತರಬೇತಿ ನಿರತ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆ ಬಳಿಕ ಸೆಮಿನಾರ್​ ಹಾಲ್​ ಜನರಿಂದ ತುಂಬಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ವಿವಾದ ಹುಟ್ಟುಹಾಕಿದೆ.

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಮತ್ತು ಪಶ್ಚಿಮ ಬಂಗಾಳ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಸೋಮವಾರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ಈ ರೀತಿ ಜನರು ತುಂಬಿರುವುದೇಕೆ, ಸಾಕ್ಷ್ಯ ನಾಶಪಡಿಸುವ ಪ್ರಯತ್ನವೇ ಎಂದು ಪ್ರಶ್ನೆ ಮಾಡಿದ್ದಾರೆ.

ಕ್ರೈಂ ಸೀನ್​ನಲ್ಲಿ ಇಷ್ಟೊಂದು ಜನ ತುಂಬಿಕೊಂಡರೆ ಪೊಲೀಸರು ತನಿಖೆ ಮಾಡುವುದಾದರೂ ಹೇಗೆ ಎಂದಿದ್ದಾರೆ. ವೈದ್ಯರು, ಪೊಲೀಸರು, ಆಸ್ಪತ್ರೆಯ ಸಿಬ್ಬಂದಿ ಮತ್ತು ಹೊರಗಿನವರ ಗುಂಪು ಅಲ್ಲಿ ಜಮಾಯಿಸಿತ್ತು.

ಮತ್ತಷ್ಟು ಓದಿ: ಕೋಲ್ಕತ್ತಾ ಅತ್ಯಾಚಾರ, ಕೊಲೆ ಪ್ರಕರಣ: ಪಾಲಿಗ್ರಾಫ್​ ಪರೀಕ್ಷೆ ವೇಳೆ ನಾನು ನಿರಪರಾಧಿ ಎಂದ ಆರೋಪಿ ಸಂಜಯ್

ಈ ವಿಡಿಯೋಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಘಟನೆ ನಡೆದ ತಕ್ಷಣ ಅಪರಾಧದ ಸ್ಥಳವನ್ನು ಸೀಲ್ ಮಾಡಲಾಗಿದೆ ಮತ್ತು ಕೆಲವು ಆಯ್ದ ಅಧಿಕಾರಿಗಳನ್ನು ಹೊರತುಪಡಿಸಿ ಯಾರಿಗೂ ಅಲ್ಲಿಗೆ ಹೋಗಲು ಅವಕಾಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯು ಮಮತಾ ಬ್ಯಾನರ್ಜಿ ಸರ್ಕಾರದ ಉದ್ದೇಶಗಳ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಘೋರ ಅಪರಾಧವನ್ನು ಮರೆಮಾಚುವ ಉದ್ದೇಶಪೂರ್ವಕ ಪ್ರಯತ್ನದಂತೆ ತೋರುತ್ತದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಅಮಿತ್ ಮಾಳವೀಯ ಹೇಳಿದ್ದಾರೆ.

ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಸುಕೇಂದು ಶೇಖರ್ ರಾಯ್, ಸೆಮಿನಾರ್ ಹಾಲ್‌ನಲ್ಲಿ ಇಷ್ಟೊಂದು ಜನರು ಹೇಗೆ ಮತ್ತು ಏಕೆ ಜಮಾಯಿಸಿದರು ಎಂದು ಕೇಳಿದರು. ಕೊಲೆ ನಡೆದ ಬಳಿಕ ಆರ್‌ಜಿ ಕರ್‌ ಮೆಡಿಕಲ್‌ ಕಾಲೇಜಿನ ಸೆಮಿನಾರ್‌ ಹಾಲ್‌ನಲ್ಲಿ ಹಲವರು ಜಮಾಯಿಸಿದ್ದರು.ಇವರು ಯಾರು?ಯಾಕೆ ಬಂದರು?ಯಾರ ಸೂಚನೆ ಮೇರೆಗೆ ಬಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಆಗಸ್ಟ್ 9 ರಂದು ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ 31 ವರ್ಷದ ಮಹಿಳಾ ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆಯ ಮರುದಿನ ಕೋಲ್ಕತ್ತಾ ಪೊಲೀಸರು ಪ್ರಮುಖ ಆರೋಪಿ ಸಂಜಯ್ ರಾಯ್ ನನ್ನು ಬಂಧಿಸಿದ್ದರು.

ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಘಟನೆಯ ಸಮಯದಲ್ಲಿ ಸಂಜಯ್ ರಾಯ್ ಕಟ್ಟಡಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ ಮತ್ತು ಅಪರಾಧದ ಸ್ಥಳದ ಬಳಿ ಅವರ ಬ್ಲೂಟೂತ್ ಹೆಡ್‌ಫೋನ್‌ಗಳು ಕಂಡುಬಂದಿವೆ.
ಸಂಜಯ್ ರಾಯ್ ವೈದ್ಯನನ್ನು ತೀವ್ರವಾಗಿ ಗಾಯಗೊಳಿಸಿ ಲೈಂಗಿಕ ಕಿರುಕುಳ ನೀಡಿ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ