ಗಡ್ಕರಿಗೆ ಜೀವ ಬೆದರಿಕೆ ಕೇಸ್​​: ಉಗ್ರ ಅಕ್ಬರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್

ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ನಾಗ್ಪುರ್​ ಪೊಲೀಸರ ವಶದಲ್ಲಿರುವ ಮೋಸ್ಟ್ ವಾಂಟೆಡ್‌ ಉಗ್ರ ಅಕ್ಬರ್ ಪಾಷಾನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಉಗ್ರ ಕಳೆದ ವರ್ಷ ನಿತಿನ್​ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ್ದನು.

ಗಡ್ಕರಿಗೆ ಜೀವ ಬೆದರಿಕೆ ಕೇಸ್​​: ಉಗ್ರ ಅಕ್ಬರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್
| Updated By: ವಿವೇಕ ಬಿರಾದಾರ

Updated on: Aug 27, 2024 | 11:21 AM

ಬೆಳಗಾವಿ, ಆಗಸ್ಟ್​ 27: ಮೋಸ್ಟ್ ವಾಂಟೆಡ್‌ ಉಗ್ರ ಅಕ್ಬರ್ ಪಾಷಾ ಹಿಂಡಲಗಾ ಜೈಲಿಗೆ (Hindalaga Jail) ಶಿಫ್ಟ್​ ಮಾಡಲಾಗಿದೆ. ಉಗ್ರ ಅಕ್ಬರ್​ ಪಾಷಾ ಮತ್ತು ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಜೊತೆಗೂಡಿ ಕಳೆದ ವರ್ಷ ಕೇಂದ್ರ ಸಚಿವ ನಿತಿನ್​ ಗಡ್ಕರಿ (Nitin Gadkari) ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು. 10 ಕೋಟಿ ರೂ. ಕೊಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಹೇಳಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಹಾರಾಷ್ಟ್ರದ ನಾಗ್ಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಸಂಬಂಧ ನಾಗ್ಪುರ ಠಾಣೆ ಪೊಲೀಸರು ಉಗ್ರ ಅಕ್ಬರ್​ ಪಾಷಾನನ್ನು ಬಾಡಿ ವಾರೆಂಟ್​ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ, ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಮತ್ತು ಅಕ್ಬರ್ ಪಾಷ್ ನಡುವೆ ಲಿಂಕ್ ಇರುವುದು ಬೆಳಕಿಗೆ ಬಂದಿದೆ. ನಂತರ ಇಬ್ಬರನ್ನು ವಿಚಾರಣೆ ಬಳಿಕ ಇದೀಗ ನಾಗ್ಪುರ ಪೊಲೀಸರು ಉಗ್ರ ಅಕ್ಬರ್​ ಪಾಷಾನನ್ನು ಮತ್ತೆ ಬೆಳಗಾವಿಗೆ ಶಿಫ್ಟ್​​ ಮಾಡಿದ್ದಾರೆ.

ಬೆಳಗಾವಿಯ ಇದೇ ಹಿಂಡಲಾಗ ಜೈಲಿಗೆ ಕೊಲೆ ಆರೋಪಿ ನಟ ದರ್ಶನ್​ ಮತ್ತು ಇತರರನ್ನು ಶಿಫ್ಟ್​ ಮಾಡುವ ಸಾಧ್ಯತೆ ಇದೆ. ದರ್ಶನ್​ ಅವರನ್ನು ಹಿಂಡಲಗಾ ಜೈಲಿಗೆ ಶಿಫ್ಟ್​ ಮಾಡಬೇಕಾದರೆ ನ್ಯಾಯಾಲಯದ ಅನುಮತಿ ಅವಶ್ಯಕತೆ ಇದೆ. ಹೀಗಾಗಿ ಶಿಫ್ಟ್​ ಸ್ವಲ್ಪ ತಡವಾಗುವ ಸಾಧ್ಯತೆ ಇದೆ. ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದಕ್ಕಾಗಿ ದರ್ಶನ್​ ಅವರ ಮೇಲೆ ಮತ್ತೆ ಎರಡು ಪ್ರಕರಣಗಳು ದಾಖಲಾಗಿವೆ. ​

ಇದನ್ನೂ ಓದಿ: ಹಿಂಡಲಗಾ ಜೈಲ್​: ದರ್ಶನ್​ ಶಿಫ್ಟ್ ಆಗಲಿರುವ 101 ವರ್ಷ ಇತಿಹಾಸದ ಕಾರಾಗೃಹದ ಬಗ್ಗೆ ನಿಮಗೆಷ್ಟು ಗೊತ್ತು?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us
Duleep Trophy 2024: ಭರ್ಜರಿ ಸೆಂಚುರಿ ಸಿಡಿಸಿದ ಪ್ರಥಮ್ ಸಿಂಗ್
Duleep Trophy 2024: ಭರ್ಜರಿ ಸೆಂಚುರಿ ಸಿಡಿಸಿದ ಪ್ರಥಮ್ ಸಿಂಗ್
Daily Devotional: ಅಧ್ಯಯನದಲ್ಲಿ ಆಸಕ್ತಿ ಮೂಡಲು ಹೀಗೆ ಮಾಡಿ
Daily Devotional: ಅಧ್ಯಯನದಲ್ಲಿ ಆಸಕ್ತಿ ಮೂಡಲು ಹೀಗೆ ಮಾಡಿ
Nithya Bhavishya: ಶನಿವಾರದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!