Daily Devotional: ದೇವರ ಹೂ ಬಾಡಿದ ಬಳಿಕ ಏನು ಮಾಡಬೇಕು? ಪ್ರಶ್ನೆಗೆ ಉತ್ತರ ಇಲ್ಲಿದೆ, ವಿಡಿಯೋ ನೋಡಿ

|

Updated on: Apr 13, 2024 | 6:54 AM

ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳೂ ಆ ಮನೆಯವರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ. ಹೂವುಗಳು ಕೂಡಾ ಇದರಿಂದ ಹೊರತಾಗಿಲ್ಲ. ತಾಜಾ ಹೂವುಗಳು ಮನೆ, ಕಚೇರಿಯಲ್ಲಿ ಸದಾ ಸಕಾರಾತ್ಮಕತೆಯನ್ನು ತುಂಬುತ್ತವೆ. ಇನ್ನು ದೇವರ ಅಲಂಕಾರಕ್ಕೆ ಬಳಸಿದ ಹೂಗಳು ಬಾಡಿದರೆ ಏನು ಸಂಕೇತ? ದೇವರ ಹೂ ಬಾಡಿದ ಬಳಿಕ ಏನು ಮಾಡಬೇಕು? ಎಂಬ ಪ್ರಶ್ನೆಗಳಿಗೆ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ...

ಮನೆ ಎಂದರೆ ನೆಮ್ಮದಿ ನೀಡುವ ತಾಣವಾಗಬೇಕು. ಸದಾ ಜಗಳ, ಅಶಾಂತಿ ಇದ್ದ ಮನೆಯಲ್ಲಿ ಖಂಡಿತಾ ನೆಮ್ಮದಿ ಇರದು. ಹೀಗಾಗಿ, ಪ್ರತಿಯೊಬ್ಬರ ಪಾಲಿಗೂ ಅವರ ಮನೆಯೇ ದೇಗುಲಕ್ಕೆ ಸಮಾನ, ದೇವಾಲಯದಷ್ಟೇ ಪವಿತ್ರ. ಇಂತಹ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕೆಂದಿದ್ದರೆ ಶಿಸ್ತುಬದ್ಧವಾದ ಜೀವನ ನಡೆಸುವುದು ಕೂಡಾ ಬಹಳ ಮುಖ್ಯ. ಅಂತೆಯೇ, ನಮ್ಮ ಶಾಸ್ತ್ರ ಗ್ರಂಥಗಳು ಕೂಡಾ ನಮಗೆ ಸಾಕಷ್ಟು ಜೀವನ ಪಾಠವನ್ನು ನೀಡುತ್ತವೆ. ಅಂತಹ ಜೀವನ ಪಾಠಗಳಲ್ಲಿ ಹೂವಿನ ಮಹತ್ವದ ಈ ಸಂದೇಶ ಕೂಡಾ ಒಂದು.ಸೌಂದರ್ಯಕ್ಕೆ ಹೆಸರಾದ ಹೂವುಗಳು ಸಮೃದ್ಧಿಯ ಸಂಕೇತ ಕೂಡಾ ಹೌದು. ಹೂವಿನ ಸೊಬಗು ಮನಸ್ಸನ್ನು ಮುದಗೊಳಿಸುತ್ತದೆ, ಮನೆ, ಕಚೇರಿಗಳನ್ನು ಸಿಂಗಾರಗೊಳಿಸುತ್ತದೆ. ದೇವರ ಪೂಜೆ, ಅಲಂಕಾರಕ್ಕೆ ಹೀಗೆ ನಾನಾ ಕಾರಣಗಳಿಂದ ಸುಂದರ ಹೂವುಗಳು ಪ್ರತಿ ಮನೆಯಲ್ಲಿ ಬಳಕೆಯಾಗುತ್ತವೆ. ಆದರೆ, ಹೀಗೆ ಹೂವುಗಳ ಬಳಕೆಯ ವಿಷಯದಲ್ಲೂ ನಾವು ಗಮನಿಸಬೇಕಾದ ಸಾಕಷ್ಟು ಅಂಶಗಳೂ ಇವೆ. ಶಾಸ್ತ್ರಗಳ ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳೂ ಆ ಮನೆಯವರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ. ಹೂವುಗಳು ಕೂಡಾ ಇದರಿಂದ ಹೊರತಾಗಿಲ್ಲ. ತಾಜಾ ಹೂವುಗಳು ಮನೆ, ಕಚೇರಿಯಲ್ಲಿ ಸದಾ ಸಕಾರಾತ್ಮಕತೆಯನ್ನು ತುಂಬುತ್ತವೆ. ಇನ್ನು ದೇವರ ಅಲಂಕಾರಕ್ಕೆ ಬಳಸಿದ ಹೂಗಳು ಬಾಡಿದರೆ ಏನು ಸಂಕೇತ? ದೇವರ ಹೂ ಬಾಡಿದ ಬಳಿಕ ಏನು ಮಾಡಬೇಕು? ಎಂಬ ಪ್ರಶ್ನೆಗಳಿಗೆ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ…