ಲೈವ್​​ಗೆ ಬನ್ನಿ! ನಮ್ಮ ಕೈಲಾಸದಲ್ಲಿ ಭರ್ಜರಿಯಾಗಿ ದೀಪಾವಳಿ ಆಚರಿಸಿಕೊಳ್ಳೋಣಾ ಎಂದ ನಿತ್ಯಾನಂದ ಸ್ವಾಮಿ

|

Updated on: Nov 11, 2023 | 6:10 PM

Nityananda Swami: ಸ್ವಾಮಿ ನಿತ್ಯಾನಂದರು ಕೈಲಾಸ ಎಂಬ ಹೆಸರಿನ ದೇಶವನ್ನು ಸ್ಥಾಪಿಸುವುದಾಗಿ ಘೋಷಿಸಿ, ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಇತ್ತೀಚೆಗೆ, ಕೈಲಾಸ ದೇಶದ ಮುಖ್ಯಸ್ಥರಾಗಿ ತಮ್ಮ ಅಧಿಪತ್ಯದಲ್ಲಿ ದೀಪಾವಳಿ ಆಚರಿಸಲು ಬನ್ನೀ ಎಂದು ತಮ್ಮ ಭಕ್ತರಿಗೆ ಮೆಗಾ ಆಹ್ವಾನ ನೀಡಿದ್ದಾರೆ.

ಅತ್ಯಾಚಾರ ಆರೋಪದಡಿ ದೇಶ ತೊರೆದಿರುವ, ಅದರಲ್ಲೂ ನಮ್ಮ ಬಿಡದಿಯಿಂದ ಪರಾರಿಯಾಗಿರುವ ವಿವಾದಿತ ಆಧ್ಯಾತ್ಮಿಕ ಗುರು ಸ್ವಾಮಿ ನಿತ್ಯಾನಂದ ಮತ್ತೆ ಸುದ್ದಿಗೆ ಮರಳಿದ್ದಾರೆ. ಸ್ವಾಮಿ ನಿತ್ಯಾನಂದರು ಕೈಲಾಸ ಎಂಬ ಹೆಸರಿನ ದೇಶವನ್ನು ಸ್ಥಾಪಿಸುವುದಾಗಿ ಘೋಷಿಸಿ, ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಇತ್ತೀಚೆಗೆ, ಕೈಲಾಸ ದೇಶದ ಮುಖ್ಯಸ್ಥರಾಗಿ ತಮ್ಮ ಅಧಿಪತ್ಯದಲ್ಲಿ ದೀಪಾವಳಿ ಆಚರಿಸಲು ಬನ್ನೀ ಎಂದು ತಮ್ಮ ಭಕ್ತರಿಗೆ ಮೆಗಾ ಆಹ್ವಾನ ನೀಡಿದ್ದಾರೆ.

ನಾನು ದೇವರ ಅವತಾರ ಎಂದು ಗುರುತಿಸಿಕೊಳ್ಳುತ್ತೇನೆ. ದೀಪಾವಳಿ ನನಗೆ ಜನ್ಮ ದಿನದಂತೆ ಭಾಸವಾಗುತ್ತದೆ ಎಂದು ಸ್ವಾಮಿ ನಿತ್ಯಾನಂದ ಬಹಿರಂಗಪಡಿಸಿದ್ದಾರೆ. ಪರಮಶಿವ ಈ ಶರೀರದಲ್ಲಿ ಪರಮ ಶಕ್ತಿಯಾಗಿ ಪ್ರತಿಷ್ಠಾಪಿಸುವ ದಿನ ನಡೆದಿದೆ ಎಂದು ಹೇಳಲಾಗುತ್ತದೆ. ಇದೇ 11ನೇ ತಾರೀಕು ಅಂದರೆ ಇಂದು ರಾತ್ರಿ ಗಂಟೆಗೆ 7 ಗಂಟೆಗೆ 30 ನಿಮಿಷಕ್ಕೆ ಸೋಷಿಯಲ್ ಮೀಡಿಯಾ ಲೈವ್ ನಲ್ಲಿ ಬನ್ನಿ, ಕೈಲಾಸ ದೇಶದ ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ ಎಂದು ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

ನಿತ್ಯಾನಂದ ಸ್ವಾಮಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಂದೇಶ ಹೀಗಿದೆ:

KAILASA’s SPH Nithyananda Paramashivam @SriNithyananda
Mark your calendar for KAILASA’s Diwali celebrations in the presence of the Supreme Pontiff of Hinduism, featuring a special live Diwali message!

Watch live on Facebook, Instagram, Twitter/@SriNithyananda, & YouTube/@NithyanandaTV 7:30PM ET | 6AM IST
Register now for exclusive two-way video-conferencing access: