ನಿವೇದಿತಾಗೆ ಬಂದಿತ್ತು ಹಲವು ಸಿನಿಮಾ ಆಫರ್; ‘ಕ್ಯಾಂಡಿ ಕ್ರಶ್’ ಸಿನಿಮಾ ಒಪ್ಪಿಕೊಳ್ಳಲು ಕಾರಣ ನೀಡಿದ ನಟಿ
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್ ಬಾಸ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ನಂತರ ಪ್ರೀತಿಸಿ ಮದುವೆ ಆದರು. ಈಗ ಮೊದಲ ಬಾರಿಗೆ ದೊಡ್ಡ ಪರದೆಮೇಲೆ ಒಟ್ಟಾಗಿ ನಟಿಸುತ್ತಿದ್ದಾರೆ. ‘ಕ್ಯಾಂಡಿ ಕ್ರಶ್’ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಕಾರಣ ನೀಡಿದ್ದಾರೆ ಅವರು.
ನಿವೇದಿತಾ ಗೌಡ (Nivedita Gowda) ಅವರು ರೀಲ್ಸ್ ಮಾಡಿ ಫೇಮಸ್ ಆದವರು. ಅವರು ಬಿಗ್ ಬಾಸ್ಗೆ ತೆರಳಿದ ಬಳಿಕ ಕಿರುತೆರೆ ರಿಯಾಲಿಟಿ ಶೋಗಳಿಂದ ಅವರಿಗೆ ಸಾಕಷ್ಟು ಆಫರ್ಗಳು ಬಂದವು. ಈಗ ಅವರು ನಾಯಕಿ ಆಗಿ ಮಿಂಚಲು ರೆಡಿ ಆಗಿದ್ದಾರೆ. ‘ಕ್ಯಾಂಡಿ ಕ್ರಶ್’ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದಾರೆ. ನಿವೇದಿತಾ ಗೌಡ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ‘ನಿರ್ದೇಶಕರು ಬಂದು ಕಥೆ ಹೇಳಿದರು. ಅವರು ಕಥೆನ ವಿವರಿಸಿದ ರೀತಿ ನನಗೆ ಸಖತ್ ಇಷ್ಟ ಆಯ್ತು. ಆಗಲೇ ಸಿನಿಮಾ ಒಪ್ಪಿಕೊಂಡೆ. ಚಂದನ್ ಈ ಚಿತ್ರದಲ್ಲಿ ಹೀರೋ ಆಗಬೇಕು ಎಂದು ಅವರು ಹೇಳಿದಾಗ ಖುಷಿ ಮತ್ತಷ್ಟು ಹೆಚ್ಚಾಯಿತು’ ಎಂದಿದ್ದಾರೆ ನಿವೇದಿತಾ ಗೌಡ. ನಿವೇದಿತಾ ಗೌಡ ಹಾಗೂ ಚಂದನ್ ಬಿಗ್ ಬಾಸ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ನಂತರ ಪ್ರೀತಿಸಿ ಅವರು ಮದುವೆ ಆದರು. ಈಗ ಮೊದಲ ಬಾರಿಗೆ ದೊಡ್ಡ ಪರದೆಮೇಲೆ ಒಟ್ಟಾಗಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ