ಅಬ್ದುಲ್ ಕಲಾಂ ವಸತಿ ಶಾಲೆ ಮಕ್ಕಳ ಜೀವದ ಜೊತೆ ಚೆಲ್ಲಾಟ: ವಿದ್ಯಾರ್ಥಿಗಳಿಗೆ ಡೇಂಜರ್ ಜರ್ನಿ ಮಾಡಿಸಿದ ಪ್ರಾಂಶುಪಾಲ

ಅಬ್ದುಲ್ ಕಲಾಂ ವಸತಿ ಶಾಲೆ ಮಕ್ಕಳ ಜೀವದ ಜೊತೆ ಚೆಲ್ಲಾಟ: ವಿದ್ಯಾರ್ಥಿಗಳಿಗೆ ಡೇಂಜರ್ ಜರ್ನಿ ಮಾಡಿಸಿದ ಪ್ರಾಂಶುಪಾಲ

ಅಮೀನ್​ ಸಾಬ್​
| Updated By: ವಿವೇಕ ಬಿರಾದಾರ

Updated on:Feb 28, 2024 | 12:40 PM

ಯಾದಗಿರಿಯ ಗುರುಮಠಕಲ್ ತಾಲೂಕಿನ ಬಾಲಚೇಡ್ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರು 10ನೇ ತರಗತಿಯ ವಿದ್ಯಾರ್ಥಿಗಳನ್ನು ಕುರಿ ಹಿಂಡು ತುಂಬವ ಹಾಗೆ ಕ್ರೋಸರ್​​ನಲ್ಲಿ ತುಂಬಿ ಪರೀಕ್ಷೆ ಬರೆಯಲು ಕಳುಹಿಸಿದ್ದಾರೆ.

ಇದು ಪರೀಕ್ಷಾ ಸಮಯ. ವಿದ್ಯಾರ್ಥಿಗಳನ್ನು (Students) ಪರೀಕ್ಷೆ (Exam) ಬರೆಯಲು ಸರ್ಕಾರಿ ವಾಹನ ಅಥವಾ ಖಾಸಗಿ ವಾಹನದಲ್ಲಿ ಸುರಕ್ಷಿತವಾಗಿ ಕಳುಹಿಸುವುದು ಪೋಷಕರು ಹಾಗೂ ಶಿಕ್ಷಕರ ಕರ್ತವ್ಯವಾಗಿದೆ. ಆದರೆ ಯಾದಗಿರಿಯ ಗುರುಮಠಕಲ್ ತಾಲೂಕಿನ ಬಾಲಚೇಡ್ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರು 10ನೇ ತರಗತಿಯ ವಿದ್ಯಾರ್ಥಿಗಳನ್ನು ಕುರಿ ಹಿಂಡು ತುಂಬವ ಹಾಗೆ ಕ್ರೋಸರ್​​ನಲ್ಲಿ ತುಂಬಿ ಪರೀಕ್ಷೆ ಬರೆಯಲು ಕಳುಹಿಸಿದ್ದಾರೆ. ಹೌದು ಅಬ್ದುಲ್ ಕಲಾಂ ವಸತಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಾಲಚೇಡ್​ ದಿಂದ ಶಹಾಪುರ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ಹೀಗಾಗಿ ವಸತಿ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಕ್ರೋಸರ್​​​ನಲ್ಲಿ ಕುರಿ ಹಿಂಡು ತುಂಬವ ಹಾಗೆ ತುಂಬಿದ್ದಾರೆ. ಅಲ್ಲದೆ ಪ್ರಾಂಶುಪಾಲರು ಮಕ್ಕಳನ್ನು ಕ್ರೂಸರ್ ಟಾಪ್ ಮೇಲೆ ಕೂರಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಇನ್ನು ಕಳೆದ ಎರಡು ತಿಂಗಳ ಹಿಂದೆ ಇದೇ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಚಿತ್ರ ಚರ್ಮ ರೋಗ ಕಾಣಿಸಿಕೊಂಡಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ

Published on: Feb 28, 2024 11:27 AM