ಬನ್ನೇರುಘಟ್ಟದಲ್ಲಿ ಒಂಟಿಯಾಗಿದ್ದ ಗೌರಿ ಎಂಬ ಹೆಸರಿನ ಜಿರಾಫೆಗೆ ಕೊನೆಗೂ ಸಿಕ್ಕಳು ಜೊತೆಗಾರ್ತಿ ಶಿವಾನಿ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಂಗಾತಿ ಇಲ್ಲದೆ ಒಂಟಿಯಾಗಿದ್ದ ಗೌರಿ ಎಂಬ ಹೆಸರಿನ ಜಿರಾಫೆಗೆ ಕೊನೆಗೂ ಗೆಳತಿ ಸಿಕ್ಕಿದ್ದಾಳೆ. ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮೈಸೂರಿನಿಂದ ಶಿವಾನಿ ಎಂಬ ಹೆಣ್ಣು ಜಿರಾಫೆಯನ್ನು ವಿಶೇಷ ವಾಹನ ಹಾಗೂ ಕೇಜ್ನ ಮೂಲಕ ಕರೆತರಲಾಗಿದೆ.
ಆನೇಕಲ್, ಫೆಬ್ರವರಿ 28: ಬನ್ನೇರುಘಟ್ಟ ಉದ್ಯಾನವನದಲ್ಲಿ (Bannerghatta Biological Park) ಸಂಗಾತಿ ಇಲ್ಲದೆ ಒಂಟಿಯಾಗಿದ್ದ ಗೌರಿ ಎಂಬ ಹೆಸರಿನ ಜಿರಾಫೆಗೆ ಕೊನೆಗೂ ಗೆಳತಿ ಸಿಕ್ಕಿದ್ದಾಳೆ. ಗೌರಿ ಜಿರಾಫೆ ಕಳೆದ 3-4 ವರ್ಷಗಳಿಂದ ಒಂಟಿಯಾಗಿತ್ತು. ಈ ಬಗ್ಗೆ ಈ ಬಗ್ಗೆ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಟಿವಿ9 ನಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರ ಬೆನ್ನಲ್ಲೇ ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನಕ್ಕೆ ಮೈಸೂರಿನಿಂದ (Mysore) ಶಿವಾನಿ ಎಂಬ ಹೆಣ್ಣು ಜಿರಾಫೆಯನ್ನು ವಿಶೇಷ ವಾಹನ ಹಾಗೂ ಕೇಜ್ನ ಮೂಲಕ ಕರೆತರಲಾಗಿದೆ. ಸತತ ಮೂರುವರೆ ಗಂಟೆಗಳ ಪ್ರಯಾಣದ ನಂತರ ಶಿವಾನಿ ಬನ್ನೇರುಘಟಕ್ಕೆ ತಲುಪಿದ್ದಾಳೆ. 1 ವರ್ಷ 8 ತಿಂಗಳಿನ ಶಿವಾನಿ ಜಿರಾಫೆಗೆ ಭರತ್ ಮತ್ತು ಬಬ್ಲಿ ಎಂಬ ಜಿರಾಫೆ ಜನ್ಮ ನೀಡಿವೆ. ಸದ್ಯ ಶಿವಾನಿ ವೈದ್ಯರು, ಪ್ರಾಣಿ ಪಾಲಕರ ಆರೈಕೆಯಲ್ಲಿದ್ದಾಳೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Feb 28, 2024 10:53 AM
Latest Videos