ನಿವೇದಿತಾ-ಚಂದನ್ ವಿಚ್ಛೇದನ; ಒಟ್ಟಾಗಿ ನಟಿಸುತ್ತಿರೋ ಸಿನಿಮಾದ ಗತಿ ಏನು?
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿಚ್ಛೇದನ ಪಡೆದಿದ್ದಾರೆ. ಈ ಮೂಲಕ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ಇವರು ಇತ್ತೀಚೆಗೆ ‘ಕ್ಯಾಂಡಿ ಕ್ರಶ್’ ಸಿನಿಮಾ ಘೋಷಿಸಿದ್ದರು. ಇದರ ಸುದ್ದಿಗೋಷ್ಠಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಕೆಲಸಗಳು ನಡೆಯುತ್ತಿವೆ.
ನಿವೇದಿತಾ ಗೌಡ (Niveditha Gowda) ಹಾಗೂ ಚಂದನ್ ಶೆಟ್ಟಿ ವಿಚ್ಛೇದನ ಪಡೆದಿದ್ದಾರೆ. ಈ ಮೂಲಕ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ಇವರು ಇತ್ತೀಚೆಗೆ ‘ಕ್ಯಾಂಡಿ ಕ್ರಶ್’ ಸಿನಿಮಾ ಘೋಷಿಸಿದ್ದರು. ಇದರ ಸುದ್ದಿಗೋಷ್ಠಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಕೆಲಸಗಳು ನಡೆಯುತ್ತಿವೆ. ಈ ಬಗ್ಗೆ ಸಿನಿಮಾ ನಿರ್ದೇಶಕ ಪುನೀತ್ ಮಾತನಾಡಿದ್ದಾರೆ. ‘ಟಿವಿಗಳಲ್ಲಿ ಸುದ್ದಿ ನೋಡಿದ ಬಳಿಕವೇ ವಿಚ್ಛೇದನ ವಿಚಾರ ಗೊತ್ತಾಯ್ತು. ಈಗಾಗಲೇ ಸಿನಿಮಾದ 35 ದಿನಗಳ ಶೂಟ್ನಲ್ಲಿ ಭಾಗಿ ಆಗಿದ್ದಾರೆ. ಒಟ್ಟಿಗೆ ಬಂದು, ಒಟ್ಟಿಗೆ ಹೋಗ್ತಿದ್ರು. ಒಬ್ಬರಿಗೊಬ್ಬರು ಕಾಳಜಿ ಮಾಡುತ್ತಿದ್ದರು’ ಎಂದಿದ್ದಾರೆ ನಿರ್ದೇಶಕ ಪುನೀತ್. ಸಿನಿಮಾ ರಿಲೀಸ್ ಆಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.