Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ: ಡಿಕೆ ಸುರೇಶ್

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ: ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 10, 2024 | 11:02 AM

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಅವರೊಂದಿಗೆ ಕೈ ಜೋಡಿಸಿ ತಾನು ಕೆಲಸ ಮಾಡುವುದಾಗಿ ಸುರೇಶ್ ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿಲ್ಲ, ಬಿಜೆಪಿಯೂ ಗೆದ್ದಿಲ್ಲ, ತನ್ನ ಮೇಲಿನ ಆಕ್ರೋಶ ಗೆಲುವು ಸಾಧಿಸಿದೆ ಎಂದು ಅವರು ಹೇಳಿದರು.

ರಾಮನಗರ: ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಮಾಜಿ ಸಂಸದ ಡಿಕೆ ಸುರೇಶ್ (DK Suresh), ಚುನಾವಣೆಯಲ್ಲಿ ತಾನು ಅಭವಿಸಿದ ಸೋಲು ಆಕಸ್ಮಿಕ, ಇದು ಶಾಶ್ವತವಲ್ಲ (permanent), ಸೋತಿರುವ ಕಾರಣಕ್ಕೆ ಕ್ಷೇತ್ರದಿಂದ ದೂರವುಳಿಯಲ್ಲ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜೊತೆ ಸೇರಿ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲು ಕಂಕಣಬದ್ಧನಾಗಿದ್ದೇನೆ ಎಂದು ಹೇಳಿದರು. ರಾಜಕಾರಣವೆಂದರೆ ಅಧಿಕಾರವಲ್ಲ, ಅಧಿಕಾಕ್ಕಾಗಿ ತಾನು ಯಾವತ್ತೂ ಹಾತೊರೆದವನಲ್ಲ, ನಿಮ್ಮಲ್ಲಿ ಒಬ್ಬನಾಗಿ ಕೆಲಸ ಮಾಡುತ್ತೇನೆ ಎಂದು ಹೇಳುವಾಗ ಸುರೇಶ್ ಭಾವುಕರಾದರು. ನಿಮ್ಮೆಲ್ಲರ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಅವರೊಂದಿಗೆ ಕೈ ಜೋಡಿಸಿ ತಾನು ಕೆಲಸ ಮಾಡುವುದಾಗಿ ಸುರೇಶ್ ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿಲ್ಲ, ಬಿಜೆಪಿಯೂ ಗೆದ್ದಿಲ್ಲ, ತನ್ನ ಮೇಲಿನ ಆಕ್ರೋಶ ಗೆಲುವು ಸಾಧಿಸಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿರಾಮ ಕೊಟ್ಟ ಮತದಾರ ಪ್ರಭುಗಳಿಗೆ ಧನ್ಯವಾದ: ಸೋಲು ಖಚಿತವಾಗುತ್ತಿದ್ದಂತೆಯೇ ಡಿಕೆ ಸುರೇಶ್ ಮಾತು