ಚಿಕ್ಕಮಗಳೂರು: ಭಿಕ್ಷಾಟನೆ ಮಾಡಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿದ ಸ್ಥಳೀಯರು

| Updated By: ವಿವೇಕ ಬಿರಾದಾರ

Updated on: Sep 11, 2023 | 9:49 AM

ಚಿಕ್ಕಮಗಳೂರು ತಾಲೂಕಿನ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡಬಗೆರೆ ಗ್ರಾಮದಲ್ಲಿ ಬಸ್​ ನಿಲ್ದಾಣವಿಲ್ಲದೆ ಜನರು ಬಿಸಿಲು, ಮಳೆಯಲ್ಲೇ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ನೂರಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಚಿಕ್ಕಮಗಳೂರು: ಬಸ್ ನಿಲ್ದಾಣಕ್ಕಾಗಿ ಆಗ್ರಹಿಸಿ ಸಾರ್ವಜನಿಕರು ವಿನೂತನ ಪ್ರತಿಭಟನೆ ಮಾಡಿದ್ದಾರೆ. ಚಿಕ್ಕಮಗಳೂರು (Chikkamagluru) ತಾಲೂಕಿನ ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡಬಗೆರೆ ಗ್ರಾಮದಲ್ಲಿ ಬಸ್​ ನಿಲ್ದಾಣವಿಲ್ಲದೆ (Bus Stand) ಜನರು ಬಿಸಿಲು, ಮಳೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಬಸ್ ನಿಲ್ದಾಣ ಮಾಡಿಸುವಂತೆ ಹತ್ತು ವರ್ಷಗಳಿಂದ ನೂರಾರು ಬಾರಿ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಅಲ್ಲದೇ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಇದರಿಂದ ರೋಸಿಹೋದ ಸಾರ್ವಜನಿಕರು ಭಿಕ್ಷಾಟನೆ ಮಾಡಿ ಅದರಿಂದ ಬಂದ ಹಣದಿಂದ ಟಾರ್ಪಲ್ ಖರೀದಿಸಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿದ್ದಾರೆ.