ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಮುಷ್ಕರ; ರಜೆ ಘೋಷಿಸಿ ಪೋಷಕರಿಗೆ ಸಂದೇಶ ರವಾನಿಸದ ಖಾಸಗಿ ಶಾಲೆಗಳು!
ಬೆಂಗಳೂರು ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದು ರಜೆ ಘೋಷಿಸಿ ಪೋಷಕರಿಗೆ ಮೆಸೇಜ್ ಹಾಕುವುದು ಮರೆತಂತಿದೆ. ಇಬ್ಬರು ಮಕ್ಕಳನ್ನು ಸ್ಕೂಟರ್ ಮೇಲೆ ಶಾಲೆಗೆ ಡ್ರಾಪ್ ಮಾಡಲು ಬಂದಿರುವ ಪೋಷಕರೊಬ್ಬರು ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಾಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಬೆಂಗಳೂರು: ಭಾರತ್ ಬಂದ್, ಕರ್ನಾಟಕ ಬಂದ್ ಅಥವಾ ಬೆಂಗಳೂರು ಬಂದ್ ಸಂದರ್ಭಗಳಲ್ಲಿ ಶಾಲೆಗೆ ಹೋಗುವ ಮಕ್ಕಳ ಪೋಷಕರಿಗೆ (parents) ಆಗುವ ಸಮಸ್ಯೆ ಅಷ್ಟಿಷ್ಟಲ್ಲ. ಇಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು (Karnataka State Private Transport Associations) ರಾಜ್ಯದಾದ್ಯಂತ ಮುಷ್ಕರ ನಡೆಸುತ್ತಿರುವುದರಿಂದ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯಲು ಪೋಷಕರು ಗೊತ್ತುಮಾಡಿದ ಆಟೋ ಅಥವಾ ಬೇರೆ ಖಾಸಗಿ ವಾಹನಗಳು ಬಾರದ ಕಾರಣ ಅವರೇ ತಮ್ಮ ತಮ್ಮ ಮಕ್ಕಳನ್ನು ಶಾಲೆಗಳಿಗೆ ಒಯ್ದು ಬಿಡುತ್ತಿದ್ದಾರೆ. ಆದರೆ, ಮುಷ್ಕರದ ಕಾರಣ ಕೆಲ ಖಾಸಗಿ ಶಾಲೆಗಳ (private schools) ಆಡಳಿತ ಮಂಡಳಿಗಳು ಕೊನೇ ಘಳಿಗೆಯಲ್ಲಿ ಸೋಮವಾರ ರಜೆ ಘೋಷಿಸಿಬಿಟ್ಟಿವೆ. ಅದೇನೋ ಸರಿ, ಅಂಥ ಎಮರ್ಜೆನ್ಸಿ ಸಂದರ್ಭದಲ್ಲಿ ಶಾಲೆಗಳ ಅಡ್ಮಿನ್ ವಿಭಾಗ ಪೋಷಕರ ಮೊಬೈಲ್ ಫೋನ್ ಗಳಿಗೆ ಸಂದೇಶ ರವಾನಿಸುತ್ತದೆ. ಬೆಂಗಳೂರು ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದು ರಜೆ ಘೋಷಿಸಿ ಪೋಷಕರಿಗೆ ಮೆಸೇಜ್ ಹಾಕುವುದು ಮರೆತಂತಿದೆ. ಇಬ್ಬರು ಮಕ್ಕಳನ್ನು ಸ್ಕೂಟರ್ ಮೇಲೆ ಶಾಲೆಗೆ ಡ್ರಾಪ್ ಮಾಡಲು ಬಂದಿರುವ ಪೋಷಕರೊಬ್ಬರು ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಾಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ