ಮುಟ್ಟಿನ ವಿಚಾರದಲ್ಲಿ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಿದ ನಟಿ ಸಪ್ತಮಿ ಗೌಡ

ಮುಟ್ಟಿನ ವಿಚಾರದಲ್ಲಿ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಿದ ನಟಿ ಸಪ್ತಮಿ ಗೌಡ

ರಾಜೇಶ್ ದುಗ್ಗುಮನೆ
|

Updated on: Sep 11, 2023 | 1:30 PM

ರಾಜ್ಯ ಸರ್ಕಾರ ಆರಂಭಿಸಿರುವ ‘ಮೈತ್ರಿ ಮುಟ್ಟಿನ ಕಪ್’ ಯೋಜನೆಗೆ ಸಪ್ತಮಿ ರಾಯಭಾರಿ ಆಗಿದ್ದಾರೆ. ಈ ಕಪ್​ನ ಉಪಯೋಗ ಏನು ಎಂಬುದನ್ನು ಸಪ್ತಮಿ ಗೌಡ ವಿವರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.

ನಟಿ ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾದಿಂದ (Kantara Movie) ಖ್ಯಾತಿ ಪಡೆದರು. ಅವರು ಈಗ ಹಿಂದಿಯ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ನಟಿಸಿದ್ದು, ಇದರ ರಿಲೀಸ್​ಗಾಗಿ ಕಾದಿದ್ದಾರೆ. ಈಗ ಅವರು ಮಂಗಳೂರಿಗೆ ತೆರಳಿ ಹೆಣ್ಣುಮಕ್ಕಳಲ್ಲಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ಆರಂಭಿಸಿರುವ ‘ಮೈತ್ರಿ ಮುಟ್ಟಿನ ಕಪ್’ ಯೋಜನೆಗೆ ಸಪ್ತಮಿ ರಾಯಭಾರಿ ಆಗಿದ್ದಾರೆ. ಈ ಕಪ್​ನ ಉಪಯೋಗ ಏನು ಎಂಬುದನ್ನು ಸಪ್ತಮಿ ಗೌಡ (Saptami Gowda) ವಿವರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ. ಮಂಗಳೂರಿನ ನೆಹರು ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದಕ್ಕೆ ಚಾಲನೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ