ಮೂರು ತಿಂಗಳಲ್ಲಿ ಸರ್ಕಾರ ಉರುಳುತ್ತೆ ಅಂತ ಬಿಜೆಪಿ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ: ಬಿಕೆ ಹರಿಪ್ರಸಾದ್
ತಮ್ಮ ವಿರುದ್ದ ಎಐಸಿಸಿ ಕರ್ನಾಟಕ ಉಸ್ತವಾರಿ ರಂದೀಪ್ ಸಿಂಗ್ ಸುರ್ಜೆವಾಲಾಗೆ ದೂರು ನೀಡುರುವ ಬಗ್ಗೆ ಕೇಳಿದಾಗ ಅವರು, ಕೇವಲ ಸುರ್ಜೆವಾಲಾಗೆ ಮಾತ್ರ ಅಲ್ಲ, ಎಲ್ಲರಿಗೂ ತಮ್ಮ ವಿರುದ್ಧ ದೂರು ಕೊಡಲಿ ಎಂದು ಹೇಳಿ ದೂರು ಕೊಡುವವರು ಮೊದಲು ತಾವೇನು ಅನ್ನೋದನ್ನ ಯೋಚನೆ ಮಾಡಬೇಕು ಅಂದರು.
ಕೊಪ್ಪಳ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ (BK Hariprasad) ಕೇವಲ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮಾತ್ರ ಹರಿಹಾಯುತ್ತಿಲ್ಲ, ಬಿಜೆಪಿ ನಾಯಕರ ವಿರುದ್ಧವೂ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಬಾಳ ಗ್ರಾಮದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರಿಗೆ, ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ಹೋಗುತ್ತೆ ಅಂತ ಬಿಜೆಪಿ ನಾಯಕರು ಆಡಿಕೊಳ್ಳುತ್ತಿದ್ದಾರಲ್ಲ ಅಂತ ಕೇಳಿದಾಗ; ಅವರು ಹಗಲು ಕನಸು (day dreaming) ಕಾಣುತ್ತಿದ್ದಾರೆ, ಅದು ತಿರುಕನ ಕನಸು ಎಂದು ಗೇಲಿ ಮಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟವಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ, ಕಾಂಗ್ರೆಸ್ ನಾಯಕರು ತಮಗೆ ಅನಿಸಿದ್ದನ್ನು ನಿರ್ಭೀತಿಯಿಂದ ಹೇಳಬಹುದು. ಬಿಜೆಪಿಯಲ್ಲಾದರೆ ನಾಯಕರು ನಾಗ್ಪುರದಿಂದ ಬರುವ ನಿರ್ದೇಶನಕ್ಕಾಗಿ ಕಾಯಬೇಕಾಗುತ್ತದೆ ಎಂದು ಪ್ರಸಾದ್ ಹೇಳಿದರು. ತಮ್ಮ ವಿರುದ್ದ ಎಐಸಿಸಿ ಕರ್ನಾಟಕ ಉಸ್ತವಾರಿ ರಂದೀಪ್ ಸಿಂಗ್ ಸುರ್ಜೆವಾಲಾಗೆ ದೂರು ನೀಡುರುವ ಬಗ್ಗೆ ಕೇಳಿದಾಗ ಅವರು, ಕೇವಲ ಸುರ್ಜೆವಾಲಾಗೆ ಮಾತ್ರ ಅಲ್ಲ, ಎಲ್ಲರಿಗೂ ತಮ್ಮ ವಿರುದ್ಧ ದೂರು ಕೊಡಲಿ ಎಂದು ಹೇಳಿ ದೂರು ಕೊಡುವವರು ಮೊದಲು ತಾವೇನು ಅನ್ನೋದನ್ನ ಯೋಚನೆ ಮಾಡಬೇಕು ಅಂದರು. ಹರಿಪ್ರಸಾದ್ ಮಾತಾಡುತ್ತಿರುವಾಗಲೇ ಹದಿಹರೆಯದ ಹುಡುಗನೊಬ್ಬ ಅವರ ಹತ್ತಿರಕ್ಕೆ ಬರುತ್ತಾನೆ. ಕೂಡಲೇ ಅವನನ್ನು ತಬ್ಬಿಕೊಳ್ಳುವ ಪ್ರಸಾದ್ ಮುಗಳ್ನಗುತ್ತಾ ತಲೆ ನೇವರಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ