ಅಭಿಮಾನಿಗೋಸ್ಕರ ಆಟೋ ಓಡಿಸಿದ ಸಚಿವ ಜಗದೀಶ್ ರೆಡ್ಡಿ, ತಾಂಡಾ ಕಾಲೋನಿಯಲ್ಲಿ ಆಟೋ ಡ್ರೈವರ್​ ಅವತಾರ!

ಅಭಿಮಾನಿಗೋಸ್ಕರ ಆಟೋ ಓಡಿಸಿದ ಸಚಿವ ಜಗದೀಶ್ ರೆಡ್ಡಿ, ತಾಂಡಾ ಕಾಲೋನಿಯಲ್ಲಿ ಆಟೋ ಡ್ರೈವರ್​ ಅವತಾರ!

TV9 Web
| Updated By: ಸಾಧು ಶ್ರೀನಾಥ್​

Updated on: Sep 11, 2023 | 1:26 PM

ಸೂರ್ಯಪೇಟೆ ಜಿಲ್ಲೆ, ಸೆಪ್ಟೆಂಬರ್ 11: ತೆಲಂಗಾಣ ವಿದ್ಯುತ್​ ಸಚಿವ ಜಗದೀಶ್ ರೆಡ್ಡಿ ಅವರು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಸದಾ ಜನರ ಸಂಪರ್ಕದಲ್ಲಿರುತ್ತಾರೆ. ಹಾಗಾಗಿ ಅಭಿಮಾನಿಯ ಆಸೆಯಂತೆ ಆಟೋ ಓಡಿಸಿ ಜೈ ಜೈ ಅಂದಿದ್ದಾರೆ. ಅದೇ ಆಟೋದಲ್ಲಿ ಗೃಹಲಕ್ಷ್ಮಿ ಫಲಾನುಭವಿಯ ಮನೆಗೆ ತೆರಳಿದ ಸಚಿವ ಜಗದೀಶ್ ಹೊಸ ಮನೆಗೆ ಶಂಕುಸ್ಥಾಪನೆ ಮಾಡಿ ಸಾಮಾನ್ಯರ ಸ್ವಂತ ಕನಸನ್ನು ನನಸು ಮಾಡಿದರು. ಸೂರ್ಯಪೇಟ ಜಿಲ್ಲೆಯ ಚಿವ್ವೆನ್ಲಾ ಮಂಡಲದ ಮುನ್ಯಾನಾಯಕ್ ತಾಂಡಾದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಅನುದಾನದ ದಾಖಲೆಗಳನ್ನು ವಿತರಿಸಲು ಮತ್ತು ಹಲವು ಮನೆಗಳ […]

ಸೂರ್ಯಪೇಟೆ ಜಿಲ್ಲೆ, ಸೆಪ್ಟೆಂಬರ್ 11: ತೆಲಂಗಾಣ ವಿದ್ಯುತ್​ ಸಚಿವ ಜಗದೀಶ್ ರೆಡ್ಡಿ ಅವರು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಸದಾ ಜನರ ಸಂಪರ್ಕದಲ್ಲಿರುತ್ತಾರೆ. ಹಾಗಾಗಿ ಅಭಿಮಾನಿಯ ಆಸೆಯಂತೆ ಆಟೋ ಓಡಿಸಿ ಜೈ ಜೈ ಅಂದಿದ್ದಾರೆ. ಅದೇ ಆಟೋದಲ್ಲಿ ಗೃಹಲಕ್ಷ್ಮಿ ಫಲಾನುಭವಿಯ ಮನೆಗೆ ತೆರಳಿದ ಸಚಿವ ಜಗದೀಶ್ ಹೊಸ ಮನೆಗೆ ಶಂಕುಸ್ಥಾಪನೆ ಮಾಡಿ ಸಾಮಾನ್ಯರ ಸ್ವಂತ ಕನಸನ್ನು ನನಸು ಮಾಡಿದರು. ಸೂರ್ಯಪೇಟ ಜಿಲ್ಲೆಯ ಚಿವ್ವೆನ್ಲಾ ಮಂಡಲದ ಮುನ್ಯಾನಾಯಕ್ ತಾಂಡಾದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಅನುದಾನದ ದಾಖಲೆಗಳನ್ನು ವಿತರಿಸಲು ಮತ್ತು ಹಲವು ಮನೆಗಳ ಶಂಕುಸ್ಥಾಪನೆ ಮಾಡಲು ಸಚಿವ ಜಗದೀಶ್ ರೆಡ್ಡಿ ತಾಂಡಾಕ್ಕೆ ತೆರಳಿದರು.

ಸಚಿವರ ಆಗಮನದ ವಿಷಯ ತಿಳಿದ ಅವರ ಅಭಿಮಾನಿ ಬಾನೋತ್ತು ರವಿ ನಾಯ್ಕ್ ಅವರು ತಮ್ಮ ನೆಚ್ಚಿನ ನಾಯಕ ಜಗದೀಶ್ ರೆಡ್ಡಿ ಅವರ ಕೈಯಲ್ಲಿ ಹೊಸದಾಗಿ ಖರೀದಿಸಿದ ಆಟೋವನ್ನು ಪ್ರಾರಂಭಿಸುವಂತೆ ಕೇಳಿಕೊಂಡರು. ತಕ್ಷಣ ಅಭಿಮಾನಿಯ ಆಸೆಯಂತೆ ಆಟೋ ಓಡಿಸಿದ ಸಚಿವರು.. ಒಂದು ಕಿಲೋ ಮೀಟರ್ ಓಡಿಸಿದ ನಂತರ ಗೃಹಲಕ್ಷ್ಮಿ ಫಲಾನುಭವಿಗಳ ಮನೆಗೆ ತೆರಳಿ ಶಂಕುಸ್ಥಾಪನೆ ನೆರವೇರಿಸಿದರು. ಇದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅಭಿಮಾನಿಗಳ ಆಸೆ ಈಡೇರಿಸಲು ಸಚಿವರು ಸಾಮಾನ್ಯರಂತೆ ಆಟೋ ಓಡಿಸಿದ್ದರಿಂದ ತಾಂಡಾದ ಜನರು ಸಂತಸ ವ್ಯಕ್ತಪಡಿಸಿದರು.