ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ

Edited By:

Updated on: Jul 02, 2025 | 4:22 PM

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಚ್ಚಳ್ಳಿ ಗ್ರಾಮವು ರಸ್ತೆ ಸಂಪರ್ಕದಿಂದ ವಂಚಿತವಾಗಿದೆ. ಇದರಿಂದಾಗಿ ಗ್ರಾಮದ ಯುವಕರಿಗೆ ಕಳೆದ ಹತ್ತು ವರ್ಷಗಳಿಂದ ಮದುವೆಯಾಗಲು ಕಷ್ಟವಾಗಿದೆ. ರೋಗಿಗಳನ್ನು ಜೋಳಗೆಯಲ್ಲಿ ಹೊತ್ತೊಯ್ಯುವಂತಹ ದುಸ್ಥಿತಿಯೂ ಇದೆ. ಮೂಲಭೂತ ಸೌಕರ್ಯಗಳಾದ ರಸ್ತೆ, ಆಸ್ಪತ್ರೆ, ಶಾಲೆಗಳ ಕೊರತೆಯಿಂದ ಗ್ರಾಮಸ್ಥರು ತೀವ್ರ ಸಂಕಷ್ಟದಲ್ಲಿದ್ದಾರೆ.

ಉತ್ತರ ಕನ್ನಡ, ಜುಲೈ 02: ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದಿದ್ದಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಚ್ಚಳ್ಳಿ ಊರಿನ ಯುವಕರಿಗೆ ಕನ್ಯೆ ಕೊಡುತ್ತಿಲ್ಲ. ದಟ್ಟ ಕಾಡಿನ ಮಧ್ಯದಲ್ಲೇ ಸುಮಾರು 4 ಕಿಮೀ ಬಂಡೆಕಲ್ಲು ಮತ್ತು ಮಣ್ಣಿನ ರಸ್ತೆಯಲ್ಲೇ ನಡೆದುಕೊಂಡು ಈ ಗ್ರಾಮಕ್ಕೆ ಹೋಗಬೇಕು. ಹೀಗಾಗಿ, ಈ ಗ್ರಾಮದ ಯುವಕರಿಗೆ ಕಳೆದ 10 ವರ್ಷಗಳಿಂದ ಯಾರೂ ಕನ್ಯೆ ಕೊಡುತ್ತಿಲ್ಲ. ಅಲ್ಲದೆ, ಗ್ರಾಮದಲ್ಲಿ ಯಾರಾದರೂ ರೋಗದಿಂದ ಬಳಲುತ್ತಿದ್ದರೆ ಅವರನ್ನು ಜೋಳಗೆಯಲ್ಲಿ ಹೆಗಲ ಮೇಲೆ ಹೊತ್ತೊಯ್ಯವ ದುಸ್ಥಿತಿ ಇದೆ. ಇನ್ನೂವರೆಗೂ ಕಟ್ಟಿಗೆಗೆ ಕಂಬಳ ಕಟ್ಟಿ ಜೊಳಿಗೆಯಲ್ಲಿ ರೋಗಿಯನ್ನು ಹೊತ್ತೊಯ್ಯುತ್ತಿದ್ದಾರೆ. ಇನ್ನು, ಮಚ್ಚಳ್ಳಿ ಗ್ರಾಮದವರೆಗೂ ಸರ್ಕಾರದ ಯಾವುದೇ ಮೂಲಭೂತ ಸೌಕರ್ಯ ತಲುಪಿಲ್ಲ. ರಸ್ತೆ, ಆಸ್ಪತ್ರೆ, ಶಾಲೆ ಸೇರಿದಂತೆ ಯಾವುದೇ ಕನಿಷ್ಟ ಮೂಲಭೂತ ಸೌಕರ್ಯ ಕೂಡ ಈ ಗ್ರಾಮಕ್ಕೆ ದೊರೆತಿಲ್ಲ.

Published on: Jul 02, 2025 04:19 PM