ಕೆವೈಸಿ ಮಾಡಿಸದಿದ್ದರೆ ವಾಣಿಜ್ಯ ದರಕ್ಕೆ ಗೃಹ ಸಿಲಿಂಡರ್ ಅಂತೆ! ಉಡುಪಿಯಲ್ಲಿ ಗ್ಯಾಸ್ ಏಜೆನ್ಸಿ ಮುಂದೆ ಜನ ಜಮಾವಣೆ
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಇತ್ತೀಚೆಗೆ ಎಲ್ಲ ತೈಲ ಕಂಪನಿಗಳು ಪಿಎಂಯುವೈ (ಪ್ರಧಾನ ಮಂತ್ರಿ ಉಜ್ವಲ ಯೋಜನಾ) ಆದ್ಯತೆಯೊಂದಿಗೆ ಪಹಲ್ (ಆಧಾರ್ ಒದಗಿಸಿದ) ಫಲಾನುಭವಿಗಳಿಂದ ಬಯೋಮೆಟ್ರಿಕ್ ಪಡೆದುಕೊಳ್ಳುವಂತೆ ಸೂಚಿಸಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಅಂತಿಮ ದಿನಾಂಕವಾಗಲಿ, ಸಹಾಯಧನವಾಗಲಿ, ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ ಎನ್ನುವ ಯಾವುದೇ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಇಲಾಖೆ ಅಥವಾ ತೈಲ ಕಂಪನಿಗಳು ನೀಡಿಲ್ಲ.
ಗ್ಯಾಸ್ ಸಂಪರ್ಕವುಳ್ಳವರು ಇ-ಕೆವೈಸಿ ಮಾಡಿಸಿದರೆ ಜನವರಿ 1ರಿಂದ ಸಹಾಯಧನ ಸಿಗಲಿದೆ, ಇ ಕೆವೈಸಿ ( e kyc) ಮಾಡಿಸದಿದ್ದರೆ ವಾಣಿಜ್ಯ ದರದಲ್ಲಿ 1,400 ರೂ.ಗಳಿಗೆ ಸಿಲಿಂಡರ್ (domestic lpg cylinder) ಪಡೆದುಕೊಳ್ಳಬೇಕಾದೀತು ಎಂಬ ಮೊಬೈಲ್ ಜಾಲತಾಣದಲ್ಲಿ ಸುಳ್ಳು ಸಂದೇಶವೊಂದು (rumor) ಕಳೆದೊಂದು ವಾರದಲ್ಲಿ (udupi) ಸಿಕ್ಕಾಪಟ್ಟೆ ಹರಿದಾಡಿದ್ದು, ಗೊಂದಲಕ್ಕೊಳಗಾದ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಸರದಿ ಸಾಲಲ್ಲಿ ನಿಂತಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಇತ್ತೀಚೆಗೆ ಎಲ್ಲ ತೈಲ ಕಂಪನಿಗಳು ಪಿಎಂಯುವೈ (ಪ್ರಧಾನ ಮಂತ್ರಿ ಉಜ್ವಲ ಯೋಜನಾ) ಆದ್ಯತೆಯೊಂದಿಗೆ ಪಹಲ್ (ಆಧಾರ್ ಒದಗಿಸಿದ) ಫಲಾನುಭವಿಗಳಿಂದ ಬಯೋಮೆಟ್ರಿಕ್ ಪಡೆದುಕೊಳ್ಳುವಂತೆ ಸೂಚಿಸಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಅಂತಿಮ ದಿನಾಂಕವಾಗಲಿ, ಸಹಾಯಧನವಾಗಲಿ, ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ ಎನ್ನುವ ಯಾವುದೇ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಇಲಾಖೆ ಅಥವಾ ತೈಲ ಕಂಪನಿಗಳು ನೀಡಿಲ್ಲ. ಆದರೂ ಡಿಸೆಂಬರ್ 31ರ ಅಂತಿಮ ದಿನವಾಗಿದೆ, ಸಹಾಯಧನ ಇಷ್ಟಿದೆ, ಇ ಕೆವೈಸಿ ಮಾಡದಿದ್ದರೆ ವಾಣಿಜ್ಯ ದರದಲ್ಲಿ ಸಿಲಿಂಡರ್ ಪಡೆಯಬೇಕಾದೀತೆನ್ನುವ ತಪ್ಪು ಮಾಹಿತಿಯನ್ನು ಕಿಡಿಗೇಡಿಗಳು ರವಾನಿಸಿದ್ದಾರೆ. ಇದರ ಪರಿಣಾಮವಾಗಿ ಉಡುಪಿಯೆಲ್ಲೆಡೆ ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ದೃಶ್ಯ ಕಂಡುಬಂದಿದೆ.