ಭದ್ರಾ ಜಲಾಶಯದಲ್ಲೂ ನೀರಿಲ್ಲ, ದಾವಣಗೆರೆ ಬಂದ್ ಗೆ ಕರೆ ನೀಡಿ ಸರ್ಕಾರದ ವಿರುದ್ಧ ರೈತರ ಆಕ್ರೋಶ!

|

Updated on: Sep 25, 2023 | 11:03 AM

ಜಿಲ್ಲಾ ಉಸ್ತುವಾರಿ ಸಚಿವರಿಗೆ ಧಿಕ್ಕಾರ, ರೈತರಿಗೆ ನೀರು ಕೊಡದ ಕೆಟ್ಟ ಸರ್ಕಾರಕ್ಕೆ ಧಿಕ್ಕಾರ, ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಅಂತ ರೈತರು ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಟಿವಿ9 ಕನ್ನಡ ವಾಹಿನಿಯ ದಾವಣಗೆರೆ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಾದ್ಯಂತ ರೈತರು ಭತ್ತ ನಾಟಿ ಮಾಡಿದ್ದಾರೆ ಆದರೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ದಾವಣಗೆರೆ: ಅತ್ತ ಕಾವೇರಿಯಲ್ಲಿ (Cauvery River) ನೀರಿಲ್ಲ ಇತ್ತ ಭದ್ರ ಜಲಾಶಯವೂ (Bhadra reservoir) ಖಾಲಿ ಖಾಲಿ. ಕೊರತೆ ಮಳೆ ಕಾರಣ ರೈತರಿಗೆ ನೀರು ಕೊಡಲಾಗದೆ ಸಿದ್ದರಾಮಯ್ಯ ಸರ್ಕಾರ (Siddaramaiah government) ಕಣ್ಣೀರು ಸುರಿಸುತ್ತಿದೆ. ಸರ್ಕಾರ ವೈಫಲ್ಯದಿಂದ ರೊಚ್ಚಿಗೆದ್ದಿರುವ ರೈತರು ಇಂದು ದಾವಣಗೆರೆಗೆ ಬಂದ್​ಗೆ ಕರೆ ನೀಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತೀಯ ರೈತ ಒಕ್ಕೂಟದ ಸದಸ್ಯರು ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ವಿರುದ್ಧ ಆಕ್ರೋಶ ವ್ಯಕ್ತಪಡಿಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಧಿಕ್ಕಾರ, ರೈತರಿಗೆ ನೀರು ಕೊಡದ ಕೆಟ್ಟ ಸರ್ಕಾರಕ್ಕೆ ಧಿಕ್ಕಾರ, ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಅಂತ ರೈತರು ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಟಿವಿ9 ಕನ್ನಡ ವಾಹಿನಿಯ ದಾವಣಗೆರೆ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಾದ್ಯಂತ ರೈತರು ಭತ್ತ ನಾಟಿ ಮಾಡಿದ್ದಾರೆ ಆದರೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ರೈತರು ಸಾರಿಗೆ ವ್ಯವಸ್ಥೆಯನ್ನೂ ಬಂದ್ ಮಾಡಿರುವುದರಿಂದ ಜನಸಾಮಾನ್ಯನಿಗೆ ತೊಂದರೆಯಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ