ದಾವಣಗೆರೆ ಬಂದ್ಗೆ ಉತ್ತಮ ಪ್ರತಿಕ್ರಿಯೆ, ಅಂಗಡಿ-ಮುಗ್ಗಟ್ಟು, ರಸ್ತೆ ಸಾರಿಗೆ ಬಂದ್; ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತಿರಲು ನಗರದಾದ್ಯಾಂತ ಪೊಲೀಸ್ ಬಂದೋಬಸ್ತ್ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲನ್ನು ವೀಕ್ಷಿಸಬಹುದು. ಬೆಳಗ್ಗೆಯಿಂದಲೇ ನಗರದಲ್ಲಿ ಜಿನುಗು ಮಳೆ ಶುರುವಿಟ್ಟುಕೊಂಡಿರುವುದರಿಂದ ಪೊಲೀಸರು ಮುಚ್ಚಿರುವ ಅಂಗಡಿಗಳ ಮುಂದೆ ಆಶ್ರಯ ಪಡೆದಿದ್ದಾರೆ.
ದಾವಣಗೆರೆ: ಭಾರತೀಯ ರೈತ ಒಕ್ಕೂಟ ಕರೆ ನೀಡಿರುವ ದಾವಣಗೆರೆ ಬಂದ್ಗೆ (Davanagere Bandh) ನಗರದ ನಿವಾಸಿಗಳು ಹಾಗೂ ವ್ಯಾಪಾರಸ್ಥರು ಉತ್ತಮ ಬೆಂಬಲ ನೀಡಿದ್ದಾರೆ. ಅಂಗಡಿ ಮುಗ್ಗಟ್ಟುಗಳ ಜೊತೆ ಶಾಲಾ ಕಾಲೇಜು, ಹೋಟೆಲ್ ಮತ್ತು ಥೇಟರ್ ಗಳು ಸಹ ಮುಚ್ಚಲ್ಪಟ್ಟಿವೆ. ಕೇಂದ್ರ ಬಸ್ ನಿಲ್ದಾಣದಿಂದ (central bus terminal) ಯಾವುದೇ ಶೆಡ್ಯೂಲ್ಡ್ ಬಸ್ ಆಚೆ ಬರುತ್ತಿಲ್ಲ, ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತಿರಲು ನಗರದಾದ್ಯಾಂತ ಪೊಲೀಸ್ ಬಂದೋಬಸ್ತ್ (police security) ಮಾಡಲಾಗಿದೆ. ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲನ್ನು ವೀಕ್ಷಿಸಬಹುದು. ಬೆಳಗ್ಗೆಯಿಂದಲೇ ನಗರದಲ್ಲಿ ಜಿನುಗು ಮಳೆ ಶುರುವಿಟ್ಟುಕೊಂಡಿರುವುದರಿಂದ ಪೊಲೀಸರು ಮುಚ್ಚಿರುವ ಅಂಗಡಿಗಳ ಮುಂದೆ ಆಶ್ರಯ ಪಡೆದಿದ್ದಾರೆ. ಕೇವಲ ತುರ್ತು ಕೆಲಸ ಇರೋರು ಮಾತ್ರ ಮನೆಗಳಿಂದ ಹೊರಬರುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 25, 2023 11:51 AM
Latest Videos