ಯಾದಗಿರಿ : ವಿಶಿಷ್ಟ ರೀತಿಯಲ್ಲಿ ಗಣೇಶ ವಿಸರ್ಜನೆ ಮಾಡಿದ ಗುರುಮಿಠಕಲ್ ಪೊಲೀಸರು
ಯಾದಗಿರಿ ಜಿಲ್ಲೆಯ ಗುರುಮಠಕಲ್ ಠಾಣೆಯ ಪೊಲೀಸರು ವಿಶೇಷವಾಗಿ ಗಣೇಶೋತ್ಸವ ಆಚರಿಸಿದ್ದಾರೆ. ಗುರುಮಿಠಕಲ್ ಪೊಲೀಸ್ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ವಿಶೇಷವಾಗಿ ವಿಸರ್ಜನೆ ಮಾಡಲಾಗಿದೆ.
ಯಾದಗಿರಿ, (ಸೆಪ್ಟೆಂಬರ್ 25): ಜಿಲ್ಲೆಯ ಗುರುಮಿಠಕಲ್ ಠಾಣೆಯ ಪೊಲೀಸರು ವಿಶೇಷವಾಗಿ ಗಣೇಶೋತ್ಸವ ಆಚರಿಸಿದ್ದಾರೆ. ಗುರುಮಠಕಲ್ ಪೊಲೀಸ್ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ವಿಶೇಷವಾಗಿ ವಿಸರ್ಜನೆ ಮಾಡಲಾಗಿದೆ. ಟ್ರಾಕ್ಟರ್ ನಲ್ಲಿ ಗಣೇಶ್ ಕುರಿಸಿ ಸುತ್ತ ಜಾಗೃತಿ ಮೂಡಿಸುವ ಬ್ಯಾನರ್ ಅಳವಡಿಸುವ ಮೂಲಕ ಪೊಲೀಸರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ರಸ್ತೆ ಸುರಕ್ಷತೆ, ಟ್ರಾಫಿಕ್ ನಿಯಮ, ವಾಹನ ಚಾಲನೆ ನಿಯಮ ಹಾಗೂ ಹೆಲ್ಮೆಟ್ ಧರಿಸುವ ಬಗ್ಗೆ ಬ್ಯಾನರ್ ಅಳವಡಿಸಿ ಗುರುಮಠಕಲ್ ಪಟ್ಟಣದಲ್ಲಿ ಮೆರವಣಿ ಮಾಡಿದರು. ಅಲ್ಲದೇ ಯಾವುದೇ ಡಿಜೆ ಸಾಂಗ್ಸ್ ಹಾಕದೇ ಜಾಗೃತಿ ಮೂಡಿಸುವ ಹಾಡುಗಳನ್ನ ಹಾಡುತ್ತಾ ಮೆರವಣಿಗೆ ಸಾಗಿದ್ದು ವಿಶೇಷ. ಇನ್ನು ಈ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪೊಲೀಸರು ಪಂಚೆ ಶರ್ಟು ಧರಿಸಿಕೊಂಡು ಭಾಗಿಯಾಗಿದ್ದರು.
