ದೇವೇಗೌಡರಿಗೆ 90ರ ಇಳಿಪ್ರಾಯದಲ್ಲಿರುವ ಉತ್ಸಾಹ ನನ್ನಂಥ ಯುವಕನಿಗೆ ಪ್ರೇರಣಾದಾಯಕವಾಗಿದೆ: ಪ್ರಧಾನಿ ನರೇಂದ್ರ ಮೋದಿ

|

Updated on: Apr 20, 2024 | 5:47 PM

ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ಕೈವಾರ ತಾತಯ್ಯ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರು ಜನಿಸಿದ ಪುಣ್ಯಭೂಮಿಯಲ್ಲಿ ನಿಮ್ಮ ದರ್ಶನ ಮಾಡುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಹೇಳಿದರು. ನಿನ್ನೆ ನಡೆದ ಮೊದಲ ಹಂತದ ಮತದಾನ ದೇಶದ ಉತ್ಸಾಹವನ್ನು ಹೆಚ್ಚಿಸಿದೆ ಮತ್ತು ಜನ ವಿಕ್ಸಿತ್ ಭಾರತ್ ಮತ್ತು ಎನ್ ಡಿಎ ಪರ ಮತ ಚಲಾಯಿಸಿ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.

ಚಿಕ್ಕಬಳ್ಳಾಪುರ: ನಗರದ ಹೊರವಲಯದಲ್ಲಿ ಆಯೋಜಿಸಲಾಗಿರುವ ಬಿಜೆಪಿ-ಜೆಡಿಎಸ್ ಸಮಾವೇಶದಲ್ಲಿ (BJP-JDS convention) ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಮಾತನ್ನು ಕನ್ನಡದಲ್ಲೇ ಆರಂಭಿಸಿದರು. ಚಿಕ್ಕಬಳ್ಳಾಪುರದ ಸೋದರ ಸೋದರಿಯರಿಗೆ ನನ್ನ ನಮಸ್ಕಾರಗಳು ಅಂತ ಮಾತು ಆರಂಭಿಸಿದ ಪ್ರಧಾನಿ ಮೋದಿ, ಕೈವಾರ ತಾತಯ್ಯ (Kaiwara Tatayya) ಮತ್ತು ಸರ್ ಎಂ ವಿಶ್ವೇಶ್ವರಯ್ಯ (Sir M Visvesvaraya) ಅವರು ಜನಿಸಿದ ಪುಣ್ಯಭೂಮಿಯಲ್ಲಿ ನಿಮ್ಮ ದರ್ಶನ ಮಾಡುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಹೇಳಿದರು. ನಿನ್ನೆ ನಡೆದ ಮೊದಲ ಹಂತದ ಮತದಾನ ದೇಶದ ಉತ್ಸಾಹವನ್ನು ಹೆಚ್ಚಿಸಿದೆ ಮತ್ತು ಜನ ವಿಕ್ಸಿತ್ ಭಾರತ್ ಮತ್ತು ಎನ್ ಡಿಎ ಪರ ಮತ ಚಲಾಯಿಸಿ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.

ನಂತರ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ಅಪರಿಮಿತ ಮತ್ತು ಬತ್ತದ ಉತ್ಸಾಹದ ಬಗ್ಗೆ ಮಾತಾಡಿದ ಪ್ರಧಾನಿ ಮೋದಿ 90ರ ಇಳಿಪ್ರಾಯದಲ್ಲಿ ಅವರಲ್ಲಿರುವ ಚೇತನ, ಹುರುಪು ಮತ್ತು ಲವಲವಿಕೆ ನನ್ನಂಥ ಯುವಕನಿಗೂ ಪ್ರೇರಣಾದಾಯಕವಾಗಿದೆ ಎಂದರು.

ಮುಂದುವರಿದು ಮಾತಾಡಿದ ಅವರು ತನಗಂತೂ ಭಾಷೆ ಆರ್ಥವಾಗಲಿಲ್ಲ ಅದರೆ, ರಾಜ್ಯದ ಹಿತಾಸಕ್ತಿಯ ಬಗ್ಗೆ ದೇವೇಗೌಡರಿಗೆ ಇರುವ ಬದ್ಧತೆ ಮತ್ತು ಕರ್ನಾಟಕಕ್ಕೆ ಈಗ ಎದುರಾಗಿರುವ ದುರ್ದೆಶೆಯ ಬಗ್ಗೆ ಅವರಲ್ಲಿರುವ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ಹೇಳಿ ಮಾಜಿ ಪ್ರಧಾನಿಯವರ ಮಾತು ಕೇಳುತ್ತಿದ್ದರೆ ಕರ್ನಾಟಕದ ಭವಿಷ್ಯ ಉಜ್ವಲವಾಗಿದೆ ಎಂಬ ಭಾವನೆ ತನ್ನಲ್ಲಿ ಮೂಡುತ್ತಿದೆ ಮತ್ತು ತಾವು ದೇವೇಗೌಡರಿಗೆ ಆಭಾರಿಯಾಗಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದೇಶದ ಅಖಂಡತೆ ಮತ್ತು ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ ಅಂತ ಜನಕ್ಕೆ ಅರ್ಥವಾಗಿದೆ: ಡಾ ಕೆ ಸುಧಾಕರ್

Published On - 5:14 pm, Sat, 20 April 24

Follow us on