ಮಂಡ್ಯ-ಮೈಸೂರು ಭಾಗಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಕೊಡುಗೆ ಏನೂ ಇಲ್ಲ: ಡಿಕೆ ಶಿವಕುಮಾರ್

ಮಂಡ್ಯ-ಮೈಸೂರು ಭಾಗಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಕೊಡುಗೆ ಏನೂ ಇಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 20, 2024 | 3:08 PM

ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಪ್ರಶ್ನಿಸಿದ ಶಿವಕುಮಾರ್ 2018ರಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿ ಮಾಡಿದ್ದಾಗ ಎರಡು ಜಿಲ್ಲೆಗಳಿಂದ ಮೂರು ಎಂಎಲ್ ಸಿ, ಮೂರು ಶಾಸಕರ ಜೊತೆಗೆ ಡಿಸಿ ತಮ್ಮಣ್ಣ, ಪುಟ್ಟರಾಜು ಮತ್ತು ಸಾರಾ ಮಹೇಶ್-ಮಂತ್ರಿಗಳಿದ್ದರು. ಆದರೆ, ಅಷ್ಟಾಗಿಯೂ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಕುಮಾರಸ್ವಾಮಿ ಏನನ್ನೂ ನೀಡಲಿಲ್ಲ.

ಮೈಸೂರು: ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ- ಅಲ್ಲಮ ಪ್ರಭು ಅವರ ವಚನಗಳನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಕಟ್ಟಾ ಎದುರಾಳಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ವಿಷಯಲ್ಲಿ ಬಳಸಿ ಮಾತಾಡಿದರು. ಇಂದು ಮೈಸೂರು ಲೋಕಸಭಾ ಕ್ಷೇತ್ರದ ಕೆಆರ್ ನಗರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ (M Laxman) ಪರ ಪ್ರಚಾರ ಮಾಡಿದ ಶಿವಕುಮಾರ್ ಮಂಡ್ಯದಿಂದ ಸ್ಪರ್ಧಿಸಿರುವ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಪ್ರಶ್ನಿಸಿದ ಶಿವಕುಮಾರ್ 2018ರಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿ ಮಾಡಿದ್ದಾಗ ಎರಡು ಜಿಲ್ಲೆಗಳಿಂದ ಮೂರು ಎಂಎಲ್ ಸಿ, ಮೂರು ಶಾಸಕರ ಜೊತೆಗೆ ಡಿಸಿ ತಮ್ಮಣ್ಣ, ಪುಟ್ಟರಾಜು ಮತ್ತು ಸಾರಾ ಮಹೇಶ್-ಮಂತ್ರಿಗಳಿದ್ದರು. ಆದರೆ, ಅಷ್ಟಾಗಿಯೂ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಕುಮಾರಸ್ವಾಮಿ ಏನನ್ನೂ ನೀಡಲಿಲ್ಲ.

ಈ ಭಾಗದ ಜನ ಎಸ್ ಎಂ ಕೃಷ್ಣ, ಶಂಕರೇಗೌಡ, ಮಾದೇಗೌಡ, ದೇವರಾಜ ಅರಸು ಮತ್ತು ಸಿದ್ದರಾಮಯ್ಯರನ್ನು ನೆನಪಿಸಿಕೊಳ್ಳುತ್ತಾರೆ. ಅದರೆ ಕಾಂಗ್ರೆಸ್ ನೆರವಿನಿಂದ ಪ್ರಧಾನಿಯಾದ ದೇವೇಗೌಡರಾಗಲೀ, ಎರಡೆರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯಾಗಲಿ ಒಂದೇ ಒಂದು ನೀರಾವರಿ ಯೋಜನೆ ಬೇರೆ ಯಾವುದೇ ಕಾರ್ಯಕ್ರಮ ಜನರಿಗೆ ನೀಡಲಿಲ್ಲ, ಹಾಗಾಗಿ ಜನರು ಅವರನ್ನು ನೆನಪಿಸಿಕೊಳ್ಳಲ್ಲ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮತದಾರರಿಗೆ ಬೆದರಿಕೆ ಆರೋಪ: ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು