ಗ್ಯಾರಂಟಿ ಯೋಜನೆ ನಿಲ್ಲುತ್ತವೆ ಅಂತ ವಿಜಯೇಂದ್ರ ಕನಸು ಕಾಣುತ್ತಿದ್ದಾರೆ, ಅವು ಯಾವತ್ತೂ ನಿಲ್ಲಲ್ಲ: ಡಿಕೆ ಶಿವಕುಮಾರ್
ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಎಸ್ ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ ಶಿವಕುಮಾರ್, ಅವರು ಕನಸು ಕಾಣುತ್ತಿದ್ದಾರೆ ಅ ಕನಸು ಯಾವತ್ತೂ ನನಸಾಗಲ್ಲ ಎಂದರು.
ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) ಪರ ಅರಕಲಗೂಡುನಲ್ಲಿ ಪ್ರಚಾರ ಮಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗ ಉಳಿದಿರುವ 4 ವರ್ಷಗಳ ಅವಧಿಯನ್ನು ಯಶ್ವಸ್ವೀಯಾಗಿ ಪೂರ್ತಿಗೊಳಿಸುವುದಲ್ಲದೆ ಮುಂದಿನ 5-ವರ್ಷಗಳ ಅವಧಿಗೂ ಆಡಳಿತ ನಡೆಸಲಿದೆ ಎಂದು ಹೇಳಿದರು. ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಬಿಎಸ್ ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ ಶಿವಕುಮಾರ್, ಅವರು ಕನಸು ಕಾಣುತ್ತಿದ್ದಾರೆ ಅ ಕನಸು ಯಾವತ್ತೂ ನನಸಾಗಲ್ಲ ಎಂದರು. ಬೆಲೆಗಳು ಗಗನಕ್ಕೇರಿರುವ ಮತ್ತು ಆದಾಯ ಪಾತಾಳ ಮುಟ್ಟಿರುವ ಇವತ್ತಿನ ದಿನಗಳಲ್ಲಿ ಮಹಿಳೆಯರಿಗೆ ಸಂಸಾರ ನಿರ್ವಹಣೆಗೆ ನೆರವಾಗಲೆಂದು ತಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅವುಗಳನ್ನು ಜಾರಿಗೆ ತಂದಿದೆ. ಆದರೆ ಲೋಕಸಭಾ ಚುನಾವಣೆಯ ನಂತರ ಅವು ನಿಂತಹೋಗಲಿವೆ, ಅವು ಶಾಶ್ವತ ಅಲ್ಲವೆಂದು ವಿಜಯೇಂದ್ರ ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಆದರೆ ಗ್ಯಾರಂಟಿ ಯೋಜನೆಗಳು ಯಾವ ಕಾರಣಕ್ಕೂ ನಿಲ್ಲಲ್ಲ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಯತ್ನ: ಡಿಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ