ಚುನಾವಣೆಯ ಬಳಿಕ ಉರುಳುತ್ತೆ ಎನ್ನಲು ದೇವೇಗೌಡರು ಸರ್ಕಾರವನ್ನು ಮಡಕೆ ಅಂದುಕೊಂಡಿದ್ದಾರೆಯೇ? ಡಿಕೆ ಶಿವಕುಮಾರ್

ರಾಜ್ಯದ ಜನ ನಮ್ಮನ್ನು 136 ಸೀಟು ನೀಡಿ ಆಶೀರ್ವದಿಸಿದ್ದಾರೆ, ತಾವು ಮನಸ್ಸು ಮಾಡಿದ್ದರೆ ಜೆಡಿಎಸ್ ಪೆಟ್ಟಿಗೆಯೆಲ್ಲ ಖಾಲಿಯಾಗೋದು, ಆದರೆ ಸಿದ್ದರಾಮಯ್ಯ ಮತ್ತು ದೆಹಲಿ ನಾಯಕರು ಸ್ವಲ್ಪ ನಿಧಾನಿಸುವಂತೆ ಹೇಳಿದ್ದಾರೆ, ಅದಕ್ಕಾಗಿ ತಡೆದುಕೊಂಡಿರುವುದಾಗಿ ಶಿವಕುಮಾರ್ ಹೇಳಿದರು.

ಚುನಾವಣೆಯ ಬಳಿಕ ಉರುಳುತ್ತೆ ಎನ್ನಲು ದೇವೇಗೌಡರು ಸರ್ಕಾರವನ್ನು ಮಡಕೆ ಅಂದುಕೊಂಡಿದ್ದಾರೆಯೇ? ಡಿಕೆ ಶಿವಕುಮಾರ್
|

Updated on: Apr 19, 2024 | 6:22 PM

ಹಾಸನ: ಜಿಲ್ಲೆಯ ಬೇಲೂರುನಲ್ಲಿ ಅಯೋಜಿಸಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) ಪರ ಮತಯಾಚನೆ ಮಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಹೆಚ್ ಡಿ ದೇವೇಗೌಡರ (HD Devegowda) ಮೇಲೆ ಪ್ರಹಾರ ನಡೆಸಿದರು. ಲೋಕಸಭಾ ಚುನಾವಣೆಯ ಬಳಿಕ  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿ ಬೀಳುತ್ತೆ ಅಂತ ಗೌಡರು ಹೇಳುತ್ತಾರೆ, ಉರುಳಿ ಬೀಳಲು ಇದೇನು ಮಡಕೆನಾ ಎಂದು ಅವರು ಕೇಳಿದರು. ರಾಜ್ಯದ ಜನ ನಮ್ಮನ್ನು 136 ಸೀಟು ನೀಡಿ ಆಶೀರ್ವದಿಸಿದ್ದಾರೆ, ತಾವು ಮನಸ್ಸು ಮಾಡಿದ್ದರೆ ಜೆಡಿಎಸ್ ಪೆಟ್ಟಿಗೆಯೆಲ್ಲ ಖಾಲಿಯಾಗೋದು, ಆದರೆ ಸಿದ್ದರಾಮಯ್ಯ ಮತ್ತು ದೆಹಲಿ ನಾಯಕರು ಸ್ವಲ್ಪ ನಿಧಾನಿಸುವಂತೆ ಹೇಳಿದ್ದಾರೆ, ಅದಕ್ಕಾಗಿ ತಡೆದುಕೊಂಡಿರುವುದಾಗಿ ಶಿವಕುಮಾರ್ ಹೇಳಿದರು.

ರಾಜ್ಯದಲ್ಲಿ ತಾವು ಗ್ಯಾರಂಟಿ ಯೋಜನೆಗಳನ್ನು ನೀಡಿದ ಹಾಗೆಯೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ., ನಿರುದ್ಯೋಗಿ ಯುವಕರಿಗೂ ವಾರ್ಷಿಕ ತಲಾ 1 ಲಕ್ಷ ರೂ., 25 ಲಕ್ಷ ರೂ. ಗಳ ಆರೋಗ್ಯ ವಿಮೆ ಮತ್ತು ರೈತರಿಗೆ ಡಾ ಸ್ವಾಮಿನಾಥನ್ ಆಯೋಗ ವರದಿ ಶಿಫಾರಸ್ಸಿನ ಹಾಗೆ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಗ್ಯಾರಂಟಿಗಳನ್ನು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಕ್ಕಳ ಭವಿಷ್ಯಕ್ಕಾಗಿ ನನ್ನ ಜಮೀನಲ್ಲಿ ಕಲ್ಲು ಒಡೆದಿದ್ದೇನೆ ಬಂಡೆ ಸೀಳಿದ್ದೇನೆ: ಡಿಕೆ ಶಿವಕುಮಾರ್

Follow us