Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಲು ಸಾಧ್ಯ: ಸಿದ್ದರಾಮಯ್ಯ

ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಲು ಸಾಧ್ಯ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 19, 2024 | 6:59 PM

ತಮಗೆ ದೇವೇಗೌಡರ ಬಗ್ಗೆ ಸಹಾನುಭೂತಿ ಹುಟ್ಟುತ್ತದೆ ಅಂದರು. ಯಾಕೆಂದರೆ ಅವರು ತಾವ್ಯಾವತ್ತೂ ಬಿಜೆಪಿ ಜೊತೆ ಕೈ ಜೋಡಿಸಲ್ಲ ಅಂತ ಹೇಳಿದ್ದರು, ಆದರೆ ಅವರಿಗೆ ತಮ್ಮ ಮಾತು ಮರೆತುಹೋಗಿದೆ, ಹಾಗಾಗಿ ಮಾತು ತಪ್ಪುವವರ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣರನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ ರನ್ನು ಗೆಲ್ಲಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದರು.

ಹಾಸನ: ಬೇಲೂರು ಕಾಂಗ್ರೆಸ್ ಸಮಾವೇಶದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ದೇಶದಲ್ಲಿ ಪ್ರಜಾಪ್ರಭುತ್ವ (Democracy) ಮತ್ತು ಸಂವಿಧಾನವನ್ನು (the Constitution) ಉಳಿಸಬೇಕಾಗಿದೆ ಎಂದು ಹೇಳಿದರು. ದೇಶದ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶ್ರಮಿಕರು. ಮಹಿಳೆಯರು ಉದ್ಧಾರವಾಗಬೇಕಾದರೆ ಸಂವಿಧಾನವನ್ನು ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಲೇಬೇಕು ಮತ್ತು ಆ ಕೆಲಸ ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು. ಜೆಡಿಎಸ್ ಪಕ್ಷವನ್ನು ಯಾರೂ ನಂಬುವಂತಿಲ್ಲ, ಯಾಕೆಂದರೆ ಅವರು ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿ ಭಾಯಿ-ಭಾಯಿ ಅಗಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ ತಮಗೆ ದೇವೇಗೌಡರ ಬಗ್ಗೆ ಸಹಾನುಭೂತಿ ಹುಟ್ಟುತ್ತದೆ ಅಂದರು. ಯಾಕೆಂದರೆ ಅವರು ತಾವ್ಯಾವತ್ತೂ ಬಿಜೆಪಿ ಜೊತೆ ಕೈ ಜೋಡಿಸಲ್ಲ ಅಂತ ಹೇಳಿದ್ದರು, ಆದರೆ ಅವರಿಗೆ ತಮ್ಮ ಮಾತು ಮರೆತುಹೋಗಿದೆ, ಹಾಗಾಗಿ ಮಾತು ತಪ್ಪುವವರ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣರನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ ರನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಅಲುಗಾಡುತ್ತಾ ಸಿಎಂ ಕುರ್ಚಿ? ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ ಶಿಷ್ಯ