ನೇಹಾ ಪ್ರಕರಣ ಆಕಸ್ಮಿಕ ಎನ್ನುವ ಗೃಹ ಸಚಿವ ಪರಮೇಶ್ವರ್ ರಾಜೀನಾಮೆ ನೀಡಬೇಕೆಂದ ಹುಬ್ಬಳ್ಳಿ ಮಹಿಳೆಯರು

ಕಾಂಗ್ರೆಸ್ ಮೊದಲಿಂದಲೂ ಓಲೈಕೆ ರಾಜಕಾಣ ಮಾಡಿಕೊಂಡು ಬಂದಿದೆ, ತಮ್ಮಿಂದ ವೋಟುಬ್ಯಾಂಕ್ ತಪ್ಪಿಹೋಗಬಾರದು ಎನ್ನುವ ಕಾರಣಕ್ಕೆ ಗೃಹ ಸಚಿವ ನೇಹಾ ಕೊಲೆಯನ್ನು ಆಕಸ್ಮಿಕ ಎನ್ನುತ್ತಿದ್ದಾರೆ, ಅದನ್ನು ಉದ್ದೇಶಪೂರ್ವಕ ಅಂತ ಹೇಳಲಾರರು, ಹಾಗೆ ಹೇಳಿದರೆ ಕೇಸ್ ಮುಚ್ಚಿಹಾಕಲಾಗಲ್ಲ ಅನ್ನೋದು ಅವರಿಗೆ ಗೊತ್ತಿದೆ ಎಂದು ಒಬ್ಬ ಯುವಕ ರೋಷದಲ್ಲಿ ಹೇಳಿದರು.

ನೇಹಾ ಪ್ರಕರಣ ಆಕಸ್ಮಿಕ ಎನ್ನುವ ಗೃಹ ಸಚಿವ ಪರಮೇಶ್ವರ್ ರಾಜೀನಾಮೆ ನೀಡಬೇಕೆಂದ ಹುಬ್ಬಳ್ಳಿ ಮಹಿಳೆಯರು
|

Updated on: Apr 19, 2024 | 4:56 PM

ಹುಬ್ಬಳ್ಳಿ: ಹುಬ್ಬಳ್ಳಿ ಯುವತಿ ನೇಹಾ ಹಿರೇಮಠ (Neha Hiremath) ಕೊಲೆಯನ್ನು ಒಂದು ಆಕಸ್ಮಿಕ ಎಂದ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಮತ್ತು ವೈಯಕ್ತಿಕ ಕಾರಣಗಳಿಗೆ ಆಗಿರುವ ಕೊಲೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿದೆ. ನಗರದಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿರುವ ಮಹಿಳೆಯರು, ಹಾಡು ಹಗಲು ಯುವತಿಯ ಕೊಲೆಯಾದರೆ ಅದನ್ನು ಅಕಸ್ಮಿಕ ಅನ್ನುವ ಪರಮೇಶ್ವರ್ ಅವರಿಗೆ ಧಿಕ್ಕಾರವಿರಲಿ, ತಮ್ಮ ಕುಟುಂಬಗಳಲ್ಲಿ ಇಂಥ ಹೀನ ಮತ್ತು ಘೋರ ಘಟನೆ ನಡೆದಿದ್ದರೆ ಅವರಾಗಲೀ ಅಥವಾ ಮುಖ್ಯಮಂತ್ರಿಯವರಾಲೀ ಈ ಬಗೆಉ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದರೇ? ಬೇರೆ ಮನೆಗಳ ಮಕ್ಕಳು ಅವರಿಗೆ ಇಷ್ಟು ಕೇವಲವಾಗಿಬಿಟ್ಟರೆ? ಯುವತಿಯ ಬಗ್ಗೆ ಸಂವೇದನೆಹೀನ ಹೇಳಿಕೆಗಳನ್ನು ನೀಡಿರುವ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ರಾಜಿನಾಮೆ ಸಲ್ಲಿಸಬೇಕು ಎಂದು ಮಹಿಳೆಯರಿ ಕೋಪ ಕಾರಿದರು. ಮಹಿಳೆಯರ ಹಾಗೆ ಪುರುಷರು ಸಹ ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ. ಕಾಂಗ್ರೆಸ್ ಮೊದಲಿಂದಲೂ ಓಲೈಕೆ ರಾಜಕಾಣ ಮಾಡಿಕೊಂಡು ಬಂದಿದೆ, ತಮ್ಮಿಂದ ವೋಟುಬ್ಯಾಂಕ್ ತಪ್ಪಿಹೋಗಬಾರದು ಎನ್ನುವ ಕಾರಣಕ್ಕೆ ಗೃಹ ಸಚಿವ ನೇಹಾ ಕೊಲೆಯನ್ನು ಆಕಸ್ಮಿಕ ಎನ್ನುತ್ತಿದ್ದಾರೆ, ಅದನ್ನು ಉದ್ದೇಶಪೂರ್ವಕ ಅಂತ ಹೇಳಲಾರರು, ಹಾಗೆ ಹೇಳಿದರೆ ಕೇಸ್ ಮುಚ್ಚಿಹಾಕಲಾಗಲ್ಲ ಅನ್ನೋದು ಅವರಿಗೆ ಗೊತ್ತಿದೆ ಎಂದು ಒಬ್ಬ ಯುವಕ ರೋಷದಲ್ಲಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ವೈಯಕ್ತಿಕ ಕಾರಣಕ್ಕೆ ಆದ ಕೊಲೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನೇಹಾ ತಂದೆ, ಕಾಂಗ್ರೆಸ್​ ಕಾರ್ಪೊರೇಟರ್​ ನಿರಂಜನ್​ ಆಕ್ರೋಶ

Follow us