EPF Transfer: ಹಳೆ ಪಿಎಫ್ ಖಾತೆ ಹಣ ಹೊಸ ಅಕೌಂಟ್ ಟ್ರಾನ್ಸ್​ಫರ್​ಗೆ ಎಷ್ಟು ದಿನ ಬೇಕು?

EPF Transfer: ಹಳೆ ಪಿಎಫ್ ಖಾತೆ ಹಣ ಹೊಸ ಅಕೌಂಟ್ ಟ್ರಾನ್ಸ್​ಫರ್​ಗೆ ಎಷ್ಟು ದಿನ ಬೇಕು?

ಕಿರಣ್​ ಐಜಿ
|

Updated on: Apr 20, 2024 | 7:51 AM

ಕೆಲಸ ಬದಲಿಸಿದಾಗ ಹಳೆ ಪಿಎಫ್ ಖಾತೆ ಹಣ ಹೊಸ ಖಾತೆಗೆ ರವಾನೆಯಾಗಲು ಎಷ್ಟು ದಿನ ಬೇಕು ಎಂಬ ಬಗ್ಗೆ ಜನರಿಗೆ ಸಂಶಯವಿರುತ್ತದೆ. ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಿದ್ದರೆ ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆಗಳಿರುವ ಸಾಧ್ಯತೆ ಇರುತ್ತದೆ. ಒಂದೇ ಯುಎಎನ್ ನಂಬರ್ ಅಡಿಯಲ್ಲಿ ಎಲ್ಲಾ ಪಿಎಫ್ ಖಾತೆಗಳನ್ನು ನಿರ್ವಹಿಸಬಹುದು.

ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವಾಗ ಕೆಲವೊಮ್ಮೆ ಕಂಪನಿ, ಕೆಲಸ ಬದಲಾವಣೆ ಅನಿವಾರ್ಯವಾಗುತ್ತದೆ. ಹೀಗೆ ಬದಲಾವಣೆಯಾದಾಗ ನಿಮ್ಮ ಬ್ಯಾಂಕ್ ಅಕೌಂಟ್, ಸ್ಯಾಲರಿ ಅಕೌಂಟ್ ಜತೆಗೆ ಪಿಎಫ್ ಅಕೌಂಟ್ ಕೂಡ ಬದಲಾಗುತ್ತದೆ. ಕೆಲಸ ಬದಲಿಸಿದಾಗ ಹಳೆ ಪಿಎಫ್ ಖಾತೆ ಹಣ ಹೊಸ ಖಾತೆಗೆ ರವಾನೆಯಾಗಲು ಎಷ್ಟು ದಿನ ಬೇಕು ಎಂಬ ಬಗ್ಗೆ ಜನರಿಗೆ ಸಂಶಯವಿರುತ್ತದೆ. ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಿದ್ದರೆ ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆಗಳಿರುವ ಸಾಧ್ಯತೆ ಇರುತ್ತದೆ. ಒಂದೇ ಯುಎಎನ್ ನಂಬರ್ ಅಡಿಯಲ್ಲಿ ಎಲ್ಲಾ ಪಿಎಫ್ ಖಾತೆಗಳನ್ನು ನಿರ್ವಹಿಸಬಹುದು. ಆದರೆ, ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆ ಹೊಂದಿರುವ ಬದಲು ಹಿಂದಿನ ಪಿಎಫ್ ಖಾತೆಗಳನ್ನು ಈಗಿರುವ ಹಾಲಿ ಪಿಎಫ್ ಖಾತೆಗೆ ವಿಲೀನಗೊಳಿಸುವುದು ಉತ್ತಮ. ಸರ್ಕಾರದಿಂದ ಸಂದಾಯವಾಗುವ ಬಡ್ಡಿಹಣ ನಿಮ್ಮ ಎಲ್ಲಾ ಹಣಕ್ಕೂ ಅನ್ವಯ ಆಗುತ್ತದೆ.