ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ ರಾಜ್ಯ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ: ಜಗದೀಶ್ ಶೆಟ್ಟರ್, ಕಾಂಗ್ರೆಸ್ ನಾಯಕ

|

Updated on: Aug 28, 2023 | 1:47 PM

ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳ ಮೇಲಾದರೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಕೇಂದ್ರದ ನಾಯಕರಿಗೆ ರಾಜ್ಯ ಬಿಜೆಪಿ ನಾಯಕರ ಮೇಲೆ ಕಿಂಚಿತ್ತೂ ನಂಬಿಕೆಯಿಲ್ಲ.

ಹುಬ್ಬಳ್ಳಿ: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar), ಬಿಜೆಪಿ ಟೀಕಿಸುವುದನ್ನು ಮುಂದುವರಿಸಿದ್ದಾರೆ. ಹುಬ್ಬಳ್ಳಿಯಲ್ಲಿಂದು ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಾಡಿದ ಅವರಿ ರಾಜ್ಯ ಬಿಜೆಪಿ ದಯನೀಯ ಸ್ಥಿತಿಯಲ್ಲಿದೆ ಮತ್ತು ಅದರ ಸ್ಥಿತಿ ದಿನೇದಿನೆ ಹದಗೆಡುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ ಹೊಸ ಸರ್ಕಾರ (new government) ಅಧಿಕಾರಕ್ಕೆ ಬಂದು 100 ದಿನಗಳ ಮೇಲಾದರೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಕೇಂದ್ರದ ನಾಯಕರಿಗೆ ರಾಜ್ಯ ಬಿಜೆಪಿ ನಾಯಕರ ಮೇಲೆ ಕಿಂಚಿತ್ತೂ ನಂಬಿಕೆಯಿಲ್ಲ. ಮೊನ್ನೆ, ಚಂದ್ರಯಾನ-3 ಸಾಧಿಸಿದ ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇಸ್ರೋ ವಿಜ್ಞನಿಗಳನ್ನು ಅಭಿನಂದಿಸಲು ಆಗಮಿಸಿದಾಗ ಅವರು ರಾಜ್ಯದ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಬಿಟ್ಟಿಕೊಳ್ಳಲಿಲ್ಲ. ಅವರೆಲ್ಲ ಬ್ಯಾರಿಕೇಡ್ ಗಳ ಆಚೆ ನಿಂತು ಪ್ರಧಾನಿಯವರಿಗೆ ವಂದಿಸುತ್ತಿದ್ದರು ಎಂದು ಶೆಟ್ಟರ್ ಹೇಳಿದರು. ಪರಿಸ್ಥಿತಿ ಹೀಗಿರುವಾಗ ವರಿಷ್ಠರು ವಿರೋಧ ಪಕ್ಷದ ನಾಯಕನನ್ನು ಅಯ್ಕೆ ಮಾಡೋದು ಸಾಧ್ಯವೇ? ಎಂದ ಅವರು, ವಿಶ್ವದ ಎರಡನೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಗೆ ರಾಜ್ಯದಲ್ಲಿ ಇಂಥ ಶೋಚನೀಯ ಸ್ಥಿತಿ ಬರಬಾರದಿತ್ತು ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ