‘ನಿಖಿಲ್​​ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?’: ಗೃಹ ಸಚಿವ ಪ್ರಿಯಾಂಕ್​​ ಖರ್ಗೆ

Edited By:

Updated on: Nov 16, 2026 | 12:59 PM

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಇದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ, ದೂರು ನೀಡಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈಗ ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶಿಸಲು ಬಿಡೋದೇ ಇಲ್ಲ. ಇದರ ಬಗ್ಗೆ ಯಾರೂ ಕೂಡ ಮಾತನಾಡಲ್ಲ ಎಂದವರು ಹೇಳಿದ್ದಾರೆ.

ಬೆಂಗಳೂರು, ನವೆಂಬರ್​​ 16: ರಾಮನಗರದಲ್ಲಿ ನಿಖಿಲ್​​ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ ವಿಚಾರದ ಬಗ್ಗೆ ನಮಗೆ ಪೂರ್ಣವಾದ ಮಾಹಿತಿ ಗೊತ್ತಿಲ್ಲ. ಯಾರು ಬೀಗ ಹಾಕಿಸ್ತಾರೆ ಅದನ್ನು ನಾವೇ ಕಾವಲು ಕಾಯಲು ಆಗಲ್ಲ. ನಿಖಿಲ್ ಇದ್ದಾರೆ ಎಂಬ ಮಾತ್ರಕ್ಕೆ ಪೊಲೀಸರು ಯಾಕೆ ಹೋಗಬೇಕು? ಈಗ ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶಿಸಲು ಬಿಡೋದೇ ಇಲ್ಲ. ಇದರ ಬಗ್ಗೆ ಯಾರೂ ಕೂಡ ಮಾತನಾಡಲ್ಲ ಎಂದು ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಹೇಳಿದ್ದಾರೆ. ಯಾರೋ ಒಬ್ಬರು ಹೋಗಿ ಆಚೆ ಇದ್ದರೆ ಇಷ್ಟು ದೊಡ್ಡ ಸುದ್ದಿನಾ? ಎಂದು ಪ್ರಶ್ನಿಸಿರುವ ಅವರು, ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದ್ದರೆ ಅದು ಸರಿಯಲ್ಲ. ಇದು ದೊಡ್ಡದು ಮಾಡುವ ವಿಷಯ ಅಲ್ಲ. ಈ ಬಗ್ಗೆ ದೂರು ಕೊಟ್ಟರೆ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Nov 16, 2026 12:59 PM
Loading...
Unable to load recommendations.
Follow Us
ಸುನಿಲ್​ ಎಮ್​ ಹೆಚ್​